ಗುರುವಾರ , ಅಕ್ಟೋಬರ್ 24, 2019
21 °C

ಟೆಸ್ಟ್‌ಗೆ ನಿವೃತ್ತಿ: ದೋನಿ ಚಿಂತನೆ

Published:
Updated:

ಪರ್ತ್ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಮುಂದಿನ ವರ್ಷ ಟೆಸ್ಟ್ ಕ್ರಿಕೆಟ್‌ನಿಂದ ದೂರವಾಗುವ ಸಾಧ್ಯತೆಯಿದೆ. ಸ್ವತಃ `ಮಹಿ~ ಈ ವಿಷಯ ಬಹಿರಂಗಪಡಿಸಿದ್ದಾರೆ.`2015ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ಬಯಕೆ. ಅದು ಈಡೇರಬೇಕಾದರೆ ಐದು ದಿನಗಳ ಪಂದ್ಯದಿಂದ ಬೇಗನೇ ನಿವೃತ್ತಿ ಹೊಂದುವುದು ಅಗತ್ಯ~ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.`2013 ರ ಕೊನೆಯ ವೇಳೆಗೆ ನನ್ನ ದೈಹಿಕ ಸಾಮರ್ಥ್ಯ ಹೇಗಿರುತ್ತದೆ ಎಂಬುದು ಮುಖ್ಯ. ಅದರ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವೆ. ಟೆಸ್ಟ್ ಪಂದ್ಯಗಳನ್ನು ಆಡುವ ಜೊತೆಗೆ 2015ರ ವಿಶ್ವಕಪ್‌ನಲ್ಲೂ ಪಾಲ್ಗೊಳ್ಳಲು ಸಾಧ್ಯವೇ ಎಂಬುದನ್ನು ನೋಡಬೇಕು. ಅದು ಕಷ್ಟವೆನಿಸಿದರೆ ಒಂದು ಪ್ರಕಾರದ (ಟೆಸ್ಟ್) ಕ್ರಿಕೆಟ್‌ನಿಂದ ದೂರವಾಗಬೇಕು~ ಎಂದರು.30ರ ಹರೆಯದ ದೋನಿ ಇದುವರೆಗೆ 66 ಟೆಸ್ಟ್‌ಗಳನ್ನು ಆಡಿದ್ದಾರೆ. ಇದರಲ್ಲಿ 36 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 17ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ದೋನಿ ಕೈಗೊಂಡಿರುವ ನಿರ್ಧಾರ ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿದೆ.ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕೆ ಎಂಬುದನ್ನು 2013ರಲ್ಲಿ ನಿರ್ಧರಿಸುವುದಾಗಿ ದೋನಿ ಈ ಹಿಂದೆ ಹೇಳಿದ್ದರು. ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

 `ಫಾರ್ಮ್ ಎಂಬುದು ಮುಖ್ಯ. ಅದರ ಜೊತೆ ಬಹಳ ಮುಂಚಿತವಾಗಿ ನಿರ್ಧಾರ ಕೈಗೊಳ್ಳುವುದು ಅಗತ್ಯ.ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂಬ ತೀರ್ಮಾನವನ್ನು ನಾನು 2014 ರಲ್ಲಿ ಇದ್ದಕ್ಕಿದ್ದಂತೆ ಪ್ರಕಟಿಸುವುದು ಒಳ್ಳೆಯದಲ್ಲ. ಆ ಬಳಿಕ ತಂಡಕ್ಕೆ ಆಗಮಿಸುವ ವಿಕೆಟ್‌ಕೀಪರ್ ಕೇವಲ 30 ರಷ್ಟು ಏಕದಿನ ಪಂದ್ಯಗಳನ್ನಾಡಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇದು ಸರಿಯಲ್ಲ~ ಎಂದು ನುಡಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)