ಟೆಸ್ಟ್ ಚಾಂಪಿಯನ್‌ಷಿಪ್ ಆಗಿ ಪರಿವರ್ತನೆ ಸಾಧ್ಯತೆ

7

ಟೆಸ್ಟ್ ಚಾಂಪಿಯನ್‌ಷಿಪ್ ಆಗಿ ಪರಿವರ್ತನೆ ಸಾಧ್ಯತೆ

Published:
Updated:

ದುಬೈ (ಪಿಟಿಐ): ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ  ಟೂರ್ನಿಯನ್ನು 2013ರಲ್ಲಿ ಟೆಸ್ಟ್ ಚಾಂಪಿಯನ್‌ಷಿಪ್ ಆಗಿ ಪರಿವರ್ತಿಸುವ ನಿರೀಕ್ಷೆ ಇದೆ.ಸೋಮವಾರ ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಾರ್ಯನಿರ್ವಾಹಕ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಮಂಡಳಿಗೆ ಅಧ್ಯಕ್ಷರ ನಾಮನಿರ್ದೇಶನ ಮತ್ತು ಆಯ್ಕೆ ಪ್ರಕ್ರಿಯೆಯ ವಿಷಯವೂ ಆದ್ಯತೆ ಪಡೆಯಲಿದೆ.ಕಳೆದ ಜೂನ್‌ನಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆದ ಸಭೆಯಲ್ಲಿ ಐಸಿಸಿ ಕಾರ್ಯನಿರ್ವಾಹಕ ಮಂಡಳಿಯು ಸ್ವತಂತ್ರ ಆಡಳಿತ ಮರುಪರಿಶೀಲನಾ ಸಮಿತಿಯನ್ನು ರಚಿಸಲಾಯಿತು ಮತ್ತು ಅದಕ್ಕೆ ಲಾರ್ಡ್ ವೂಲ್ಫ್ ಬ್ಯಾರೆನ್ ಅವರನ್ನು ಚೇರಮನ್‌ಆಗಿ ನೇಮಕ ಮಾಡಲಾಗಿತ್ತು. ಸೋಮವಾರದ ಸಭೆಯಲ್ಲಿ ಭಾಗವಹಿಸಲಿರುವ ಅವರು ತಮ್ಮ ವರದಿಯನ್ನು ಸಲ್ಲಿಸಲಿರುವುದೂ ಈಗ ಕುತೂಹಲ ಕೆರಳಿಸಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.`ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅನ್ನು ಸಮರ್ಥವಾಗಿ ನಿಭಾಯಿಸುವುದೇ ನಮ್ಮ ಎಲ್ಲ ಚಟುವಟಿಕೆಗಳ ಮತ್ತು ಕಾರ್ಯಸೂಚಿಗಳ ಉದ್ದೇಶವಾಗಿದೆ. ನಮ್ಮ ಜೊತೆಗೆ ಲಾರ್ಡ್ ವೂಲ್ಫ್ ಅವರು ವರದಿಯನ್ನು ಸಲ್ಲಿಸಲಿರುವುದು ಮಹತ್ವದ ಕಾರ್ಯವಾಗಲಿದೆ~ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾರೂನ್ ಲಾರ್ಗಟ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry