ಟೇಬಲ್ ಟೆನಿಸ್‌ಆಗ್ನೇಯ-ಸೆಂಟ್ರಲ್ ರೈಲ್ವೆ ಫೈನಲ್‌ಗೆ

ಬುಧವಾರ, ಜೂಲೈ 17, 2019
30 °C

ಟೇಬಲ್ ಟೆನಿಸ್‌ಆಗ್ನೇಯ-ಸೆಂಟ್ರಲ್ ರೈಲ್ವೆ ಫೈನಲ್‌ಗೆ

Published:
Updated:

ಧಾರವಾಡ: ಹಾಲಿ ಚಾಂಪಿಯನ್ ಆಗ್ನೇಯ ರೈಲ್ವೆ ಹಾಗೂ ಕಳೆದ ಸಲ ಸೆಮಿಫೈನಲ್ ತಲುಪಿದ್ದ ಸೆಂಟ್ರಲ್ ರೈಲ್ವೆ ತಂಡಗಳು ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿರುವ ಅಖಿಲ ಭಾರತ ರೈಲ್ವೆ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ತಂಡ ಸ್ಪರ್ಧೆಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.ಸೆಮಿಫೈನಲ್ ಪಂದ್ಯಗಳಲ್ಲಿ ಆಗ್ನೇಯ ರೈಲ್ವೆ 3-1ರಿಂದ ದಕ್ಷಿಣ ರೈಲ್ವೆಯನ್ನು ಪರಾಭವಗೊಳಿಸಿದರೆ, ಸೆಂಟ್ರಲ್ ರೈಲ್ವೆ 3-0ಯಿಂದ ಆತಿಥೇಯ ನೈಋತ್ಯ ರೈಲ್ವೆ ವಿರುದ್ಧ ಜಯ ಸಾಧಿಸಿತು.ಆಗ್ನೇಯ ರೈಲ್ವೆ ಅನಿರ್ಬನ್ ನಂದಿ  8-11, 11-3, 6-11, 5-11ರಿಂದ ಎಲ್. ಸಚಿನ್ ವಿರುದ್ಧ ಸೋಲುವ ಮೂಲಕ ಆರಂಭಿಕ ಆಘಾತವನ್ನು ಅನುಭವಿಸಬೇಕಾಯಿತು.ಸೌಮ್ಯಜೀತ್ ಸರ್ಕಾರ್ 11-8, 8-11, 11-4, 11-7ರಿಂದ ಜಿ.ವಿನೋದ್ ಮೇಲೂ; ಅಮಿತ್ ದಾಸ್ 11-9, 4-11, 12-10, 19-17ರಿಂದ ಎಂ. ಸುಭಾಸ್ ವಿರುದ್ಧವೂ; ಅನಿರ್ಬನ್ 11-7, 13-11, 11-7ರಿಂದ ಜಿ. ವಿನೋದ್ ಮೇಲೂ ಜಯ ಸಾಧಿಸುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry