ಟೇಬಲ್ ಟೆನಿಸ್: ಅಮೋಘ-ಸ್ಫೂರ್ತಿಗೆ ಪ್ರಶಸ್ತಿ ಸಂಭ್ರಮ

ಶುಕ್ರವಾರ, ಜೂಲೈ 19, 2019
28 °C

ಟೇಬಲ್ ಟೆನಿಸ್: ಅಮೋಘ-ಸ್ಫೂರ್ತಿಗೆ ಪ್ರಶಸ್ತಿ ಸಂಭ್ರಮ

Published:
Updated:

ಧಾರವಾಡ: ಎರಡನೇ ಶ್ರೇಯಾಂಕದ ಆಟಗಾರ ನಿಪ್ಪಾಣಿ ಎಂಟಿಟಿಎಯ ಅಮೋಘ ಅಥಣಿ ಹಾಗೂ ಅಗ್ರ ಶ್ರೇಯಾಂಕದ ಆಟಗಾರ್ತಿ ಮೈಸೂರು ಪಿಟಿಟಿಎಯ ಎಂ.ವಿ. ಸ್ಫೂರ್ತಿ ಇಲ್ಲಿ ನಡೆದಿರುವ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಕ್ರಮ ವಾಗಿ ಸಬ್ ಜೂನಿಯರ್ ಬಾಲಕ- ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡರು.ಕಾಸ್ಮಸ್ ಕ್ಲಬ್‌ನಲ್ಲಿ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಮೋಘ ಅಥಣಿ 11-4, 9-11, 11-9, 8-11, 12-10ರಿಂದ ಅಗ್ರ ಶ್ರೇಯಾಂಕದ ಆಟಗಾರ ಬೆಂಗಳೂರಿನ ಹೊರೈಜಾನ್ ಕ್ಲಬ್‌ನ ಸುಚೇತ್ ಶೆಣೈಗೆ ಸೋಲಿನ ರುಚಿ ತೋರಿಸಿದರು.ಸೆಮಿಫೈನಲ್ ಪಂದ್ಯಗಳಲ್ಲಿ ಸುಚೇತ್ 12-10, 11-9, 8-11, 11-6ರಿಂದ ಕೆನರಾ ಯೂನಿಯನ್‌ನ ಬಿ. ರಕ್ಷಿತ್ ಅವರನ್ನು ಪರಾಭವಗೊಳಿಸಿದರೆ, ಅಮೇಓಘ 11-6, 11-8, 12-10ರಲ್ಲಿ ಹೊರೈಜಾನ್ ಕ್ಲಬ್‌ನ ರಾಹುಲ್ ಸತಿಹಾಳ ಮೇಲೆ ಗೆದ್ದರು.್ವರ್ಟರ್ ಫೈನಲ್ ಪಂದ್ಯಗಳಲ್ಲಿ ಸುಚೇತ್ 11-3, 12-10, 11-9ರಿಂದ ಸ್ಟಾರ್ ಕ್ಲಬ್‌ನ ಎ.ಎಸ್. ಕುಲಕರ್ಣಿ ಮೇಲೂ; ರಕ್ಷಿತ್ 15-13, 12-10, 12-10ರಿಂದ ಹುಬ್ಬಳ್ಳಿ ಎಸ್.ಅಭಿಜಿತ್ ವಿರುದ್ಧವೂ ಗೆಲುವು ಪಡೆದರು.ಇದೇ ವಿಭಾಗದಲ್ಲಿ ರಾಹುಲ್ 11-6, 11-5, 11-5ರಿಂದ ಬೆಂಗಳೂರು ಬಿಎನ್‌ಎಂನ ತಪನ್ ಗಣಪತಿ ಮೇಲೂ; ಅಮೋಘ 11-9, 11-7, 11-9ರಿಂದ ಜೆಟಿಟಿಎಯ ನಿರಜ್‌ರಾಜ್ ವಿರುದ್ಧವೂ ಜಯ ಸಾಧಿಸಿದರು.

ಬಾಲಕಿಯರ ಸಬ್ ಜೂನಿಯರ್ ವಿಭಾಗದ ಫೈನಲ್‌ನಲ್ಲಿ ಎಂ.ವಿ. ಸ್ಫೂರ್ತಿ 9-11, 8-11, 11-9, 11-9, 11-6ರಿಂದ ಸ್ಟಾರ್ ಕ್ಲಬ್‌ನ ಎನ್. ಐಶ್ವರ್ಯಾ ವಿರುದ್ಧ ಗೆಲುವು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry