ಟೇಬಲ್ ಟೆನಿಸ್: ಚರಣ್‌ಗೆ ಪ್ರಶಸ್ತಿ

ಬುಧವಾರ, ಜೂಲೈ 17, 2019
24 °C

ಟೇಬಲ್ ಟೆನಿಸ್: ಚರಣ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಎಸ್‌ಎಐ ತಂಡದ ವಿ.ಪಿ. ಚರಣ್ ಅವರು ಇಲ್ಲಿ ನಡೆಯುತ್ತಿರುವ ಕೆನರಾ ಯೂನಿಯರ್ ಆಶ್ರಯದ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಜೂನಿಯರ್ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು.ಸೋಮವಾರ ನಡೆದ ಫೈನಲ್‌ನಲ್ಲಿ ಚರಣ್ 11-8, 11-7, 12-14, 8-11, 11-8, 9-11, 11-2 ರಲ್ಲಿ ಹೊರೈಜನ್ ಕ್ಲಬ್‌ನ ಸುನಂದ್ ವಾಸನ್ ವಿರುದ್ಧ ರೋಚಕ ಗೆಲುವು ಪಡೆದರು.ಚರಣ್ ಆರಂಭದಲ್ಲಿ 2-0 ರಲ್ಲಿ ಮುನ್ನಡೆ ಗಳಿಸಿದ್ದರು. ಆದರೆ ಸುನಂದ್ ಮರುಹೋರಾಟ ನಡೆಸಿದ ಕಾರಣ 3-3 ರಲ್ಲಿ ಸಮಬಲ ಕಂಡುಬಂತು. ಕೊನೆಯ ಗೇಮ್‌ನಲ್ಲಿ ಚರಣ್ ಅವರ ಕೈಮೇಲಾಯಿತು.ಸೆಮಿಫೈನಲ್‌ನಲ್ಲಿ ಸುನಂದ್ 11-6, 11-4, 11-6, 11-4 ರಲ್ಲಿ ವೇದಾಂತ್ ಎಂ ಅರಸ್ ವಿರುದ್ಧವೂ, ಚರಣ್ 11-7, 10-12, 12-10, 11-9, 7-11, 11-4 ರಲ್ಲಿ ಶ್ರೇಯಲ್ ಕೆ ತೆಲಾಂಗ್ ಎದುರೂ ಜಯ ಪಡೆದಿದ್ದರು.ಐಶ್ವರ್ಯ ಚಾಂಪಿಯನ್: ಐಶ್ವರ್ಯ ಆರ್. ಬಿದರಿ ಯೂತ್ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು. ಫೈನಲ್‌ನಲ್ಲಿ ಅವರು 11-1, 11-1, 11-7, 11-6 ರಲ್ಲಿ ಎನ್. ಐಶ್ವರ್ಯ ವಿರುದ್ಧ ಜಯ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry