ಟೇಬಲ್ ಟೆನಿಸ್: ನವನೀತ್‌ಗೆ ಪ್ರಶಸ್ತಿ

ಶನಿವಾರ, ಜೂಲೈ 20, 2019
27 °C

ಟೇಬಲ್ ಟೆನಿಸ್: ನವನೀತ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಎ.ಆರ್. ನವನೀತ್ ಇಲ್ಲಿ ನಡೆಯುತ್ತಿರುವ 44ನೇ ಕೆನರಾ ಯೂನಿಯನ್ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಯೂತ್ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು.

ಪ್ರಕಾಶ್ ಕೋರ್ಟ್ಸ್‌ನಲ್ಲಿ ಸೋಮವಾರ ನಡೆದ ಫೈನಲ್‌ನಲ್ಲಿ ನವನೀತ್ 11-6, 12-10, 11-6, 11-8 ರಲ್ಲಿ ಶ್ರೇಯಲ್ ಕೆ. ತೆಲಾಂಗ್ ವಿರುದ್ಧ ಗೆದ್ದರು. ಸೆಮಿಫೈನಲ್‌ನಲ್ಲಿ ಅವರು ವಿ.ಪಿ. ಚರಣ್ ಎದುರು ಪ್ರಯಾಸದ ಜಯ ಸಾಧಿಸಿದ್ದರು.ಮೈತ್ರೇಯಿ ಬೈಲೂರು ಮತ್ತು ಎಂ. ಮಾಧುರ್ಯ ಅವರು ಯೂತ್ ಬಾಲಕಿಯರ ವಿಭಾಗದ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಮೈತ್ರೇಯಿ 7-11, 12-10, 12-10, 15-13, 11-7 ರಲ್ಲಿ ಬಿ.ಎಸ್. ಅರ್ಪಿತಾ ವಿರುದ್ಧ ಜಯ ಪಡೆದರೆ, ಮಾಧುರ್ಯ 11-5, 11-6, 9-11, 11-7,13-11 ರಲ್ಲಿ ಆರ್. ರಕ್ಷಾ ಅವರನ್ನು ಮಣಿಸಿದರು.ಶ್ರೇಯಸ್ ಕುಲಕರ್ಣಿ ಮತ್ತು ಎಂ.ವಿ. ಸ್ಫೂರ್ತಿ ಅವರು ಕ್ರಮವಾಗಿ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು. ಫೈನಲ್‌ನಲ್ಲಿ ಶ್ರೇಯಸ್ 12-10, 11-7, 11-6 ರಲ್ಲಿ ಆರ್.ಬಿ. ರಕ್ಷಿತ್ ಎದುರೂ, ಸ್ಫೂರ್ತಿ 4-11, 11-9, 11-7, 11-2 ರಲ್ಲಿ ಪ್ರಿಯಾ ರಾವ್ ಮೇಲೂ ಜಯ ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry