ಸೋಮವಾರ, ಏಪ್ರಿಲ್ 19, 2021
33 °C

ಟೇಬಲ್ ಟೆನಿಸ್: ನವನೀತ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎ.ಆರ್. ನವನೀತ್ ಮತ್ತು ಮೈತ್ರೇಯಿ ಬೈಲೂರ್ ಇಲ್ಲಿ ನಡೆದ ಡಾ. ಎಂ.ಎಸ್. ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಯೂತ್ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.ಮಲ್ಲೇಶ್ವರಂ ಸಂಸ್ಥೆ ಹಾಲ್‌ನಲ್ಲಿ ಭಾನುವಾರ ನಡೆದ ಯೂತ್ ಬಾಲಕರ ವಿಭಾಗದ ಫೈನಲ್‌ನಲ್ಲಿ ನವನೀತ್ 11-7, 11-8, 11-3, 11-13, 11-5 ರಲ್ಲಿ ಸುನಂದ್ ವಾಸನ್ ವಿರುದ್ಧ ಗೆದ್ದರು.ಯೂತ್ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಮೈತ್ರೇಯಿ 11-3, 11-9, 8-11, 13-11, 11-5 ರಲ್ಲಿ ಎಂ. ಮಾಧುರ್ಯ ಅವರನ್ನು ಮಣಿಸಿದರು. ಜೂನಿಯರ್ ಬಾಲಕಿಯರ ವಿಭಾಗದಲ್ಲೂ ಚಾಂಪಿಯನ್ ಆಗಿದ್ದ ಮೈತ್ರೇಯಿ ಈ ಮೂಲಕ `ಪ್ರಶಸ್ತಿ ಡಬಲ್~ ಸಾಧನೆ ತಮ್ಮದಾಗಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.