ಟೇಬಲ್ ಟೆನಿಸ್: ಮೈತ್ರೇಯಿ, ರಿಧಿ ಚಾಂಪಿಯನ್

7

ಟೇಬಲ್ ಟೆನಿಸ್: ಮೈತ್ರೇಯಿ, ರಿಧಿ ಚಾಂಪಿಯನ್

Published:
Updated:
ಟೇಬಲ್ ಟೆನಿಸ್: ಮೈತ್ರೇಯಿ, ರಿಧಿ ಚಾಂಪಿಯನ್

ಬೆಂಗಳೂರು: ಮೈತ್ರೆಯಿ ಬೈಲೂರು ಮತ್ತು ರಿಧಿ ರೋಹಿತ್ ಅವರು ಇಲ್ಲಿ ನಡೆದ ಆಲ್ಟ್ರಾಟೆಕ್ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೇನಿಸ್ ಟೂರ್ನಿಯಲ್ಲಿ ಶನಿವಾರ ಎರಡು ವಿಭಾಗಗಳ ಫೈನಲ್‌ನಲ್ಲಿ ಪರಸ್ಪರ ಎದುರಾದರು. ಇಬ್ಬರೂ ತಲಾ ಒಂದೊಂದು ಪ್ರಶಸ್ತಿ ಪಡೆದು ಗೌರವವನ್ನು ಸಮನಾಗಿ ಹಂಚಿಕೊಂಡರು.ಯೂತ್ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಎಚ್‌ಟಿಟಿಎ ಕ್ಲಬ್‌ನ ರಿಧಿ 11-9, 11-3, 11-5, 11-9 ರಲ್ಲಿ ಬಿಟಿಟಿಎಯ ಮೈತ್ರೇಯಿ ವಿರುದ್ಧ ಗೆದ್ದರು. ಆದರೆ ಜೂನಿಯರ್ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ತಿರುಗೇಟು ನೀಡಿದ ಮೈತ್ರೇಯಿ 11-5, 11-5, 11-9, 11-9 ರಲ್ಲಿ ರಿಧಿ ಅವರನ್ನು ಮಣಿಸಿ ಚಾಂಪಿಯನ್ ಆದರು.ಇದಕ್ಕೂ ಮುನ್ನ ನಡೆದ ಯೂತ್ ಬಾಲಕಿಯರ ವಿಭಾಗದ ನಾಲ್ಕರಘಟ್ಟದ ಪಂದ್ಯಗಳಲ್ಲಿ ರಿಧಿ 7-11, 10-12, 11-8, 11-7, 11-6, 6-11, 11-6 ರಲ್ಲಿ ಹರಿಪ್ರಿಯ ಅವರನ್ನು ಮಣಿಸಿದ್ದರೆ, ಮೈತ್ರೇಯಿ 11-6, 5-11, 11-7, 9-11, 11-6, 11-6 ರಲ್ಲಿ ಎನ್. ಐಶ್ವರ್ಯ ಎದುರು ಜಯ ಪಡೆದಿದ್ದರು.ಜೂನಿಯರ್ ಬಾಲಕಿಯರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಮೈತ್ರೇಯಿ 11-6, 11-4, 11-8, 11-4 ರಲ್ಲಿ ಆರ್.ವಿನೀತಾ ಎದುರೂ, ರಿಧಿ 13-11, 12-10, 11-8, 11-9 ರಲ್ಲಿ ಎಂ. ಮಾಧುರ್ಯ ಮೇಲೂ ಗೆಲುವು ಸಾಧಿಸಿದ್ದರು.ಶ್ರೇಯಲ್‌ಗೆ ಪ್ರಶಸ್ತಿ: ಬಿಎನ್‌ಎಂನ ಶ್ರೇಯಲ್ ತೆಲಾಂಗ್ ಜೂನಿಯರ್ ಬಾಲಕರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅವರು ಫೈನಲ್‌ನಲ್ಲಿ 11-9, 13-11, 10-12, 11-9, 8-11, 12-10 ರಲ್ಲಿ ಹೊರೈಜನ್‌ನ ಸುನಂದ್ ವಾಸನ್ ವಿರುದ್ಧ ಜಯ ಸಾಧಿಸಿದರು.ಸೆಮಿಫೈನಲ್ ಪಂದ್ಯಗಳಲ್ಲಿ ಶ್ರೇಯಲ್ 11-6, 5-11, 11-6, 10-12, 12-10 ರಲ್ಲಿ ವಿ.ಪಿ. ಚರಣ್ ವಿರುದ್ಧವೂ, ಸುನಂದ್ 11-5, 11-9, 8-11, 11-7, 12-10 ರಲ್ಲಿ ಆರ್.ಬಿ. ರಕ್ಷಿತ್ ಮೇಲೂ ಜಯ ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry