ಗುರುವಾರ , ಮೇ 6, 2021
26 °C

ಟೇಬಲ್ ಟೆನಿಸ್; ರೋಹನ್, ಖುಷಿಗೆ ಕೆಡೆಟ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೊಗಸಾದ ಪ್ರದರ್ಶನ ನೀಡಿದ ರೋಹನ್ ಜಮದಗ್ನಿ ಹಾಗೂ ಜಿಇಎಂಎಸ್‌ನ ವಿ. ಖುಷಿ ಜಯನಗರ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಟಿವಿಎಸ್ ವೇಗೊ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ಕೆಡೆಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಇಲ್ಲಿನ ದ ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ ಡಾ. ರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ  ರೋಹನ್ 9-11, 9-11, 11-8, 14-12, 11-9ರಲ್ಲಿ ಜೆಟಿಟಿಎನ ನೀರಜ್ ರಾಜ್ ಅವರನ್ನು ಸೋಲಿಸಿ ಚಾಂಪಿಯನ್ ಆದರು. ಮೊದಲ ಎರಡು ಗೇಮ್‌ನಲ್ಲಿ ಸೋಲು ಕಂಡು, ನಂತರ ಗೆಲುವು ಪಡೆದರು.ಬಾಲಕಿಯರ ವಿಭಾಗದ ಅಂತಿಮ ಘಟ್ಟದ ಪಂದ್ಯದಲ್ಲಿ ಖುಷಿ 9-11, 11-5,12-10, 11-9ರಲ್ಲಿ ಸಿ.ಸಿ.ಎ.ನ ಅರ್ಚನಾ ಕಾಮತ್ ವಿರುದ್ಧ ಗೆಲುವು ಪಡೆದು ಪ್ರಶಸ್ತಿ ಜಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.