ಮಂಗಳವಾರ, ಜನವರಿ 28, 2020
29 °C
ಕ್ರಿಕೆಟ್: ನ್ಯೂಜಿಲೆಂಡ್ ಬೃಹತ್ ಮೊತ್ತ

ಟೇಲರ್ ಚೊಚ್ಚಲ ದ್ವಿಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡ್ಯುನೆಡಿನ್ (ಎಎಫ್‌ಪಿ): ರಾಸ್‌ ಟೇಲರ್ (ಅಜೇಯ 217) ಅವರ ಅಮೋಘ ಆಟದ ನೆರವಿನಿಂದ ನ್ಯೂಜಿಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬೃಹತ್ ಮೊತ್ತ ಪೇರಿಸಿದೆ.ಇಲ್ಲಿನ ಯೂನಿವರ್ಸಿಟಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಎರಡನೇ ದಿನವಾದ ಬುಧವಾರ ಕಿವೀಸ್ 153.1 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 609 ರನ್‌ ಕಲೆಹಾಕಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.367 ರನ್‌ಗಳಿಂದ ದಿನದಾಟ ಆರಂಭಿಸಿದ ಕಿವೀಸ್ 13 ರನ್ ಪೇರಿಸುವಷ್ಟರಲ್ಲಿ  ನಾಯಕ ಮೆಕ್ಲಮ್ ವಿಕೆಟ್ ಕಳೆದುಕೊಂಡಿತು.  ನಂತರ ವೇಗವಾಗಿ ರನ್ ಕಲೆ ಹಾಕಿದ ಟೇಲರ್ ಚೊಚ್ಚಲ ದ್ವಿಶತಕದ ಸಾಧನೆ ಮಾಡಿದರು.  319 ಎಸೆತಗಳನ್ನು ಎದು ರಿಸಿದ ಅವರು 23 ಬೌಂಡರಿ ಗಳಿಸುವ ಮೂಲಕ ಅಜೇಯರಾಗುಳಿದರು.ವಿಂಡೀಸ್‌ಗೆ ಆಘಾತ: ಕಿವೀಸ್‌ ನೀಡಿರುವ ಬೃಹತ್‌ ಮೊತ್ತವನ್ನು ಬೆನ್ನಟ್ಟಿರುವ  ವಿಂಡೀಸ್ ಬುಧವಾರದ ಆಟದ ಅಂತ್ಯಕ್ಕೆ 24 ಓವರ್‌ಗಳಲ್ಲಿ 67 ರನ್‌ ಕಲೆಹಾಕುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ.ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 153.1 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 609 ಡಿಕ್ಲೇರ್ (ಬ್ರೆಂಡನ್ ಮೆಕ್ಲಮ್‌ 113, ಬಿಜೆ ವಾಲ್ಟಿಂಗ್ 41, ರಾಸ್‌ ಟೇಲರ್ ಔಟಾಗದೆ 217, ಟಿನೋ ಬೆಸ್ಟ್ 148 ಕ್ಕೆ 3, ದೇವನಾರಾಯಣ 76 ಕ್ಕೆ 2, ಡರೆನ್ ಸಮಿ 79 ಕ್ಕೆ 2); ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 24 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 67 (ಡರೆನ್ ಬ್ರಾವೊ ಬ್ಯಾಟಿಂಗ್ 37, ಸ್ಯಾಮುಯೆಲ್ಸ್ ಬ್ಯಾಟಿಂಗ್ 14, ಟ್ರೆಂಟ್‌ ಬೌಲ್ಟ್ 7ಕ್ಕೆ 1).

ಪ್ರತಿಕ್ರಿಯಿಸಿ (+)