ಟೈಗರ್ ಏರ್‌ವೇಸ್ ಒಪ್ಪಂದ

7

ಟೈಗರ್ ಏರ್‌ವೇಸ್ ಒಪ್ಪಂದ

Published:
Updated:

ಬೆಂಗಳೂರು: ವಿಮಾನ ಟಿಕೆಟ್ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಪ್ರಮುಖ ಪ್ರವಾಸಿ ಸಂಸ್ಥೆ ವಯಾ ಡಾಟ್ ಕಾಂ ಮತ್ತು ಅಗ್ಗದ ದರದ ವಿಮಾನಯಾನ ಸಂಸ್ಥೆ ಟೈಗರ್ ಏರ್‌ವೇಸ್ ಬುಧವಾರ ಇಲ್ಲಿ ಒಪ್ಪಂದ ಮಾಡಿಕೊಂಡಿವೆ.ಈ ಜಂಟಿ ಪಾಲುದಾರಿಕೆಯಡಿ ವಯಾ ಡಾಟ್ ಕಾಂ, ಭಾರತ, ಇಂಡೋನೇಷಿಯಾ ಮತ್ತು ಪಿಲಿಫೀನ್ಸ್‌ಗಳಲ್ಲಿ ಟೈಗರ್ ಏರ್‌ವೇಸ್‌ನ ಅಧಿಕೃತ ಟಿಕೆಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸಲಿದೆ. ಹೋಟೆಲ್ ಬುಕ್ಕಿಂಗ್ ಸೇರಿದಂತೆ ಹಲವು ಮೌಲ್ಯವರ್ಧಿತ ಸೇವೆಗಳನ್ನೂ ಒದಗಿಸಲಿದೆ.  ಟೈಗರ್ ಏರ್‌ವೇಸ್ 13 ದೇಶಗಳ 50ಕ್ಕೂ ಹೆಚ್ಚು ನಗರಗಳಿಗೆ ಸಂಪರ್ಕ ಹೊಂದಿದ್ದು,  ಈ ಸಹಭಾಗಿತ್ವದ ಮೂಲಕ ಜಾಗತಿಕ ಮಾರುಕಟ್ಟೆ ವಿಸ್ತರಿಸುವ ಯೋಜನೆ ಹೊಂದಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ವಯಾ ಡಾಟ್ ಕಾಂನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿನಯ್ ಗುಪ್ತಾ ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry