ಟೈಟಾನ್ಸ್‌ ನೆರವಿಗೆ ಡಿವಿಲಿಯರ್ಸ್‌

7
ಚಾಂಪಿಯನ್ಸ್‌ ಲೀಗ್: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸವಾಲಿನ ಗುರಿ

ಟೈಟಾನ್ಸ್‌ ನೆರವಿಗೆ ಡಿವಿಲಿಯರ್ಸ್‌

Published:
Updated:

ರಾಂಚಿ (ಪಿಟಿಐ): ಎಬಿ ಡಿವಿಲಿಯರ್ಸ್‌ (77, 36 ಎಸೆತ, 3 ಬೌಂ, 7 ಸಿಕ್ಸರ್‌) ತೋರಿದ ಬಿರುಸಿನ ಆಟದ ನೆರವಿನಿಂದ ಟೈಟಾನ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಗೆಲುವಿಗೆ 186 ರನ್‌ಗಳ ಗುರಿ ನೀಡಿದೆ.ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೈಟಾನ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 185 ರನ್‌ ಪೇರಿಸಿತು.ಈ ಗುರಿ ಬೆನ್ನಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮರು ಹೋರಾಟ ನಡೆಸುವಲ್ಲಿ ಯಶಸ್ವಿಯಾ ಗಿದೆ. ಮಹೇಂದ್ರ ಸಿಂಗ್‌ ದೋನಿ ಬಳಗ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 13 ಓವರ್‌ಗಳಲ್ಲಿ 3 ವಿಕೆಟ್‌ಗೆ 142 ರನ್‌ ಗಳಿಸಿತ್ತು.ಮುರಳಿ ವಿಜಯ್‌ (0) ಬೇಗನೇ ವಿಕೆಟ್‌ ಒಪ್ಪಿಸಿದರು. ಆದರೆ ಮೈಕ್‌ ಹಸ್ಸಿ (47, 26 ಎಸೆತ, 7 ಬೌಂ, 1 ಸಿಕ್ಸರ್‌) ಹಾಗೂ ಸುರೇಶ್ ರೈನಾ (47, 28 ಎಸೆತ, 5 ಬೌಂ, 2 ಸಿಕ್ಸರ್‌) ಉತ್ತಮ ಆಟ ತೋರಿದರು. ಇವರು ಎರಡನೇ ವಿಕೆಟ್‌ಗೆ 89 ರನ್‌ಗಳನ್ನು ಕಲೆಹಾಕಿದರು.ಟಾಸ್‌ ಗೆದ್ದ ದೋನಿ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಹೆನ್ರಿ ಡೇವಿಡ್ಸ್‌ (52, 43 ಎಸೆತ, 4 ಬೌಂ, 2 ಸಿಕ್ಸರ್‌) ಮತ್ತು ಜಾಕ್‌ ರುಡಾಲ್ಫ್‌ (21) ಮೊದಲ ವಿಕೆಟ್‌ಗೆ 46 ರನ್‌ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.ರುಡಾಲ್ಫ್‌ ರನೌಟ್‌ ಆಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ ಬಂದ ಎಬಿ ಡಿವಿಲಿಯರ್ಸ್‌ ಭರ್ಜರಿ ಆಟ ತೋರಿದರು. ಡೇವಿಡ್ಸ್‌ ಮತ್ತು ವಿಲಿಯರ್ಸ್‌ ಎರಡನೇ ವಿಕೆಟ್‌ಗೆ 39 ಎಸೆತಗಳಲ್ಲಿ 76 ರನ್‌ಗಳನ್ನು ಸೇರಿಸಿದರು. ಈ ಜೊತೆಯಾಟ ತಂಡದ ಉತ್ತಮ ಮೊತ್ತಕ್ಕೆ ಕಾರಣ.ಎದುರಾಳಿ ಬೌಲರ್‌ಗಳ ಮೇಲೆ ‘ದಂಡೆತ್ತಿ’ ಹೋದ ಡಿವಿಲಿಯರ್ಸ್‌ ಏಳು ಸಿಕ್ಸರ್‌ಗಳನ್ನು ಸಿಡಿಸಿದರು. ಫರ್ಹಾನ್‌ ಬೆಹರ್ದೀನ್‌ (21, 14 ಎಸೆತ) ಕೊನೆಯಲ್ಲಿ ರನ್‌ ವೇಗ ಹೆಚ್ಚಿಸಿದರು.34 ರನ್‌ಗಳಿಗೆ ಎರಡು ವಿಕೆಟ್‌ ಪಡೆದ ಡ್ವೇನ್‌ ಬ್ರಾವೊ ಸೂಪರ್‌ ಕಿಂಗ್ಸ್‌ ಪರ ಯಶಸ್ವಿ ಬೌಲರ್‌ ಎನಿಸಿಕೊಂಡರು. ರವೀಂದ್ರ ಜಡೇಜ ತಮ್ಮ ಮೂರು ಓವರ್‌ಗಳಲ್ಲಿ 49 ರನ್‌ಗಳನ್ನು ಬಿಟ್ಟುಕೊಟ್ಟರು.ಸಂಕ್ಷಿಪ್ತ ಸ್ಕೋರ್‌: ಟೈಟಾನ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 185 (ಹೆನ್ರಿ ಡೇವಿಡ್ಸ್‌ 52, ಜಾಕ್‌ ರುಡಾಲ್ಫ್‌ 21, ಎಬಿ ಡಿವಿಲಿಯರ್ಸ್‌ 77, ಫರ್ಹಾನ್‌ ಬೆಹರ್ದೀನ್‌ 21, ಡ್ವೇನ್‌ ಬ್ರಾವೊ 34ಕ್ಕೆ 2, ಆರ್‌. ಅಶ್ವಿನ್‌ 36ಕ್ಕೆ 1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry