ಟೈಟಾನ್ಸ್ ತಂಡಕ್ಕೆ ಜಯ

7

ಟೈಟಾನ್ಸ್ ತಂಡಕ್ಕೆ ಜಯ

Published:
Updated:
ಟೈಟಾನ್ಸ್ ತಂಡಕ್ಕೆ ಜಯ

ಸೆಂಚೂರಿಯನ್ (ಪಿಟಿಐ): ಜಾಕ್ ರುಡಾಲ್ಫ್ (83, 59 ಎಸೆತ, 9 ಬೌಂ, 3 ಸಿಕ್ಸರ್) ತೋರಿದ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೈಟಾನ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.ಸೂಪರ್ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮಾರ್ಟಿನ್ ವಾನ್ ಜಾಸ್‌ವೆಲ್ಡ್ ನೇತೃತ್ವದ ತಂಡ 39 ರನ್‌ಗಳಿಂದ ಪರ್ತ್ ಸ್ಕಾಚರ್ಸ್ ವಿರುದ್ಧ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 163 ರನ್ ಪೇರಿಸಿದರೆ, ಎದುರಾಳಿ ತಂಡ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಸವಾಲಿನ ಗುರಿ ಬೆನ್ನಟ್ಟಿದ ಸ್ಕಾಚರ್ಸ್ ತಂಡ 17 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು.ಆ ಬಳಿಕ ಮಿಚೆಲ್ ಮಾರ್ಷ್ (ಅಜೇಯ 52, 41 ಎಸೆತ, 5 ಬೌಂ, 1 ಸಿಕ್ಸರ್) ಮತ್ತು ಸೈಮನ್ ಕ್ಯಾಟಿಚ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದರಾದರೂ ಯಶ ಕಾಣಲಿಲ್ಲ. 16 ರನ್‌ಗಳಿಗೆ ಮೂರು ವಿಕೆಟ್ ಪಡೆದ ಕನೇಲಿಯಸ್ ಡಿವಿಲಿಯರ್ಸ್ ಟೈಟಾನ್ಸ್ ಪರ ಮಿಂಚಿದರು.ಇದಕೂ ಮುನ್ನ ರುಡಾಲ್ಫ್ ಮತ್ತು ಹೆನ್ರಿ ಡೇವಿಡ್ಸ್ (54, 38 ಎಸೆತ, 4 ಬೌಂ, 4 ಸಿಕ್ಸರ್) ಮೊದಲ ವಿಕೆಟ್‌ಗೆ 109 ರನ್ ಸೇರಿಸಿ ಟೈಟಾನ್ಸ್ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.ಸಂಕ್ಷಿಪ್ತ ಸ್ಕೋರ್: ಟೈಟಾನ್ಸ್
: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 163 (ಜಾಕ್ ರುಡಾಲ್ಫ್ 83, ಹೆನ್ರಿ ಡೇವಿಡ್ಸ್ 54, ನಥಾನ್ ರಿಮಿಂಗ್ಟನ್ 20ಕ್ಕೆ 2). ಪರ್ತ್ ಸ್ಕಾಚರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 124 (ಮಿಚೆಲ್ ಮಾರ್ಷ್ ಔಟಾಗದೆ 52, ಸೈಮನ್ ಕ್ಯಾಟಿಚ್ 23, ಹರ್ಷೆಲ್ ಗಿಬ್ಸ್ 19, ಕನೇಲಿಯಸ್ ಡಿವಿಲಿಯರ್ಸ್ 16ಕ್ಕೆ 3). ಫಲಿತಾಂಶ: ಟೈಟಾನ್ಸ್‌ಗೆ 39 ರನ್ ಜಯ ಹಾಗೂ ನಾಲ್ಕು ಪಾಯಿಂಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry