ಟೈಟಾನ್ಸ್ ತಂಡಕ್ಕೆ ಸುಲಭ ಗೆಲುವು

7

ಟೈಟಾನ್ಸ್ ತಂಡಕ್ಕೆ ಸುಲಭ ಗೆಲುವು

Published:
Updated:

ಡರ್ಬನ್ (ಪಿಟಿಐ): ಜಾಕ್ ರುಡಾಲ್ಫ್ (63, 56 ಎಸೆತ, 7 ಬೌಂ) ಮತ್ತು ಫರ್ಹಾನ್ ಬೆಹರ್ದೀನ್ (ಅಜೇಯ 48, 23 ಎಸೆತ, 1 ಬೌಂ, 3 ಸಿಕ್ಸರ್) ಅವರ ಆಕರ್ಷಕ ಆಟದ ನೆರವಿನಿಂದ ಟೈಟಾನ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 59 ರನ್‌ಗಳಿಂದ ಆಕ್ಲೆಂಡ್ ತಂಡವನ್ನು ಮಣಿಸಿತು.ಬುಧವಾರ ಮೊದಲು ಬ್ಯಾಟ್ ಮಾಡಿದ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 172 ರನ್ ಪೇರಿಸಿದರೆ, ಆಕ್ಲೆಂಡ್ 18.1 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟಾಯಿತು.ಸಂಕ್ಷಿಪ್ತ ಸ್ಕೋರ್: ಟೈಟಾನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 172 (ಹೆನ್ರಿ ಡೇವಿಡ್ಸ್ 36, ಜಾಕ್ ರುಡಾಲ್ಫ್ 63, ಫರ್ಹಾನ್ ಬೆಹರ್ದೀನ್ ಔಟಾಗದೆ 48, ಮೈಕಲ್ ಬೇಟ್ಸ್ 21ಕ್ಕೆ 1, ಅಜರ್ ಮಹಮೂದ್ 32ಕ್ಕೆ 1).

ಆಕ್ಲೆಂಡ್: 18.1 ಓವರ್‌ಗಳಲ್ಲಿ 113 (ಆಂಡ್ರೆ ಆ್ಯಡಮ್ಸ 30, ಎತಿ ಮಬಲಾಟಿ 26ಕ್ಕೆ 3, ಅಲ್ಫೋನ್ಸೊ ಥಾಮಸ್ 18ಕ್ಕೆ 3). ಪಂದ್ಯಶ್ರೇಷ್ಠ: ಫರ್ಹಾನ್ ಬೆಹರ್ದೀನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry