ಟೈರ್‌ಗೆ ಬೆಂಕಿ ಹಚ್ಚಿ ದಲಿತರ ಪ್ರತಿಭಟನೆ

7

ಟೈರ್‌ಗೆ ಬೆಂಕಿ ಹಚ್ಚಿ ದಲಿತರ ಪ್ರತಿಭಟನೆ

Published:
Updated:
ಟೈರ್‌ಗೆ ಬೆಂಕಿ ಹಚ್ಚಿ ದಲಿತರ ಪ್ರತಿಭಟನೆ

ನವಲಗುಂದ: ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಅನುಷ್ಠಾ ನಕ್ಕಾಗಿ ಆಗ್ರಹಿಸಿ ಬೆಳಗಾವಿ  ಸುವರ್ಣ ಸೌಧದ ಎದುರು ದಲಿತ ಸಂಘಟನೆ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲು ಮುಂದಾದಾಗ ಮುಗ್ಧ ದಲಿತರ ಮೇಲೆ ಮನಸೋ ಇಚ್ಛೆ ಪೊಲೀಸರು ಲಾಠಿ ಪ್ರಹಾರ ನಡೆಸಿ ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ಇಲ್ಲಿನ ದಲಿತ ಸಂಘಟನೆ ಕಾರ್ಯ ಕರ್ತರು ಸೋಮವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ದಲಿತ ಮುಖಂಡ ಈರಣ್ಣ ಸಿಡಗಂಟಿ ಮಾತನಾಡಿ, ಮಾನವೀಯ ಮೌಲ್ಯ ಮರೆತು ದಲಿತರ ಮೇಲೆ ದೌರ್ಜನ್ಯವೆ ಸಗಿದ ಪೊಲೀಸರನ್ನು ಕೂಡಲೇ ಅಮಾ ನತುಗೊಳಿಸಬೇಕು. ಇದಕ್ಕೆ ಸಹಕರಿಸಿದ  ಬಿಜೆಪಿ ಸರಕಾರವನ್ನು ವಜಾ ಮಾಡ ಬೇಕೆಂದು ಆಗ್ರಹಿಸಿದರು.ಬಸವರಾಜ ಮುಧೋಳೆ, ದೇವೆಂದ್ರ ಪ್ಪ ಮಾದರ, ಸಂಗಪ್ಪ ಮಾದರ, ಶಂಭು ಶಿದ್ರಾಮಶೆಟ್ಟರ,  ಬಿ.ಎಸ್.ದುಂದೂರ ಮಾತನಾಡಿ ಪೊಲೀಸರ ದೌರ್ಜನ್ಯವನ್ನು ಖಂಡಿಸಿದರು.ನಂತರ ತಹಶೀಲ್ದಾರ ಕಾರ್ಯಾಲ ಯಕ್ಕೆ ತೆರಳಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಸಿಂಧು ಬಿ. ಅವರಿಗೆ ಮನವಿ ಸಲ್ಲಿಸಿದರು.ಬಿಎಸ್‌ಆರ್ ಕಾಂಗ್ರೆಸ್ ಕಾರ್ಯ ಕರ್ತರು ಸಹ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಹನಮಂತಪ್ಪ ಕೇಳ ಗೇರಿ, ಶಿವರಾಯಪ್ಪ ಮಾದರ, ಪ್ರಕಾಶ ಸಾಲಿ, ಮಲ್ಲಯ್ಯ ಚರಂತಿಮಠ, ಹನ ಮಂತ ಕುಕುನೂರ, ತಿರಕಪ್ಪ ಹೆಬಸೂರ, ರಾಜು ನಡುವಿನಮನಿ, ಶಿವಪುತ್ರಪ್ಪ ಕೆಳಗೇರಿ, ಸತೀಶ ನಡಗೇರಿ, ಕಲ್ಮೇಶ ಮಾದರ, ಸತೀಶ ನಡಗೇರಿ ಮೊದಲಾದ ವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry