ಸೋಮವಾರ, ಮೇ 17, 2021
21 °C

ಟೈಲರ್ಸ್ ಭವನಕ್ಕೆ ರೂ 40 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯ ದರ್ಜಿಗಳ ಸಂಘ ನಿರ್ಮಿಸಲಿರುವ `ಟೈಲರ್ಸ್ ಭವನ~ಕ್ಕೆ ಮುಖ್ಯಮಂತ್ರಿ ನಿಧಿಯಿಂದ ರೂ. 40 ಲಕ್ಷ ಒದಗಿಸಲಾಗುವುದು ಎಂದು ಬಂದರು ಮತ್ತು ಪರಿಸರ ಸಚಿವ ಕೃಷ್ಣ ಪಾಲೆಮಾರ್ ಭರವಸೆ ನೀಡಿದ್ದಾರೆ.ನಗರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಟೈಲರ್‌ಗಳ ಸಂಘದ ದ.ಕ. ಜಿಲ್ಲಾ ಸಮಾವೇಶ ಮತ್ತು ಸರ್ಕಾರದ ಪಿಂಚಣಿ ಯೋಜನೆಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸ ಪಿಂಚಣಿ ಯೋಜನೆಗೆ ರಾಜ್ಯದಿಂದ ನೀಡುವ ಸಹಾಯಧನವನ್ನು ಈಗಿನ 5 ವರ್ಷದಿಂದ 10 ವರ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಹೊಸ ಪಿಂಚಣಿ ಯೋಜನೆ ಪ್ರಯೋಜನ ಪಡೆದವರ ಸಂಖ್ಯೆ 2074 ಮಾತ್ರ. ಕರಾವಳಿ 2 ಜಿಲ್ಲೆಗಳ 1201 ದರ್ಜಿಗಳೂ ಸೇರಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಟೈಲರ್‌ಗಳು ಮಾದರಿ ಎಂದು ಶ್ಲಾಘಿಸಿದರು. ಅವರ ಈ ಮಾತಿಗೆ ಪೂರಕವೆಂಬಂತೆ ಭಾರಿ ಸಂಖ್ಯೆಯಲ್ಲಿ ಟೈಲರ್‌ಗಳೂ ಅಲ್ಲಿ ಸೇರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.