ಶುಕ್ರವಾರ, ಜೂನ್ 25, 2021
27 °C

ಟೈಲರ್ ವೃತ್ತಿ– ನಿರ್ಲಕ್ಷ್ಯ ಬೇಡ: ವಸಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರ್ವ: ಬಡವರ್ಗದ ನಾಗರಿಕರು ಜೀವನೋಪಾ­ಯವಾಗಿ ಟೈಲರ್ ವೃತ್ತಿ ಆರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇತರ ವೃತ್ತಿಗೆ ಹೋಲಿಸಿದರೆ ಟೈಲರ್‌ ವೃತ್ತಿನಿರತರ ಬಗ್ಗೆ ಸರ್ಕಾರ ಗಮನಹರಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯ ಟೈಲರ್‌ಗಳ ಸಂಘದ ಅಧ್ಯಕ್ಷ ಬಿ.ವಸಂತ್ ತಿಳಿಸಿದ್ದಾರೆ. ಶಿರ್ವ ರೋಟರಿ ಸಭಾಭವನದಲ್ಲಿ ಕರ್ನಾಟಕ  ರಾಜ್ಯ ಟೈಲರ್‌ಗಳ ಸಂಘದ ಕಾಪು ಕ್ಷೇತ್ರ ಸಮಿತಿ ವತಿಯಿಂದ ಇತ್ತೀಚೆಗೆ ನಡೆದ ಕ್ಷೇತ್ರ ಸಮಿತಿ ಸದಸ್ಯರ ಕುಟುಂಬ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಹಿರಿಯ ಟೈಲರ್ಸ್‌ರ್‌ಗಳನ್ನು ಸಮಿತಿ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಮಲಿಕ್ ಮಾತನಾಡಿ, ಸದಸ್ಯರೆಲ್ಲರೂ ‘ಆಮ್ ಆದ್ಮಿ ವಿಮಾ ಯೋಜನೆ’ಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ ಮಾತನಾಡಿದರು. ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್, ರಾಮಚಂದ್ರ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ ಆಚಾರ್ಯ ಬಂಡೀ­ಮಠ, ವಲಯಾಧ್ಯಕ್ಷರಾದ ಸದಾಶಿವ ಆಚಾರ್ ಶಿರ್ವ, ಶೇಖರ್ ಮೂಲ್ಯ ಬೆಳ್ಮಣ್, ಮೋಹಿನಿ ಆರ್. ಪಡುಬಿದ್ರಿ, ಡೇವಿಡ್ ಅಮ್ಮನ್ನ ಕಟಪಾಡಿ, ವಸಂತಿ ಡಿ. ಶೆಟ್ಟಿ ಕಾಪು ಉಪಸ್ಥಿತರಿದ್ದರು.  ಹಿರಿಯ ವೃತ್ತಿನಿರತರಾದ ರಾಮಪ್ಪ ಅಮೀನ್ ಶಿರ್ವ ವಲಯ, ರಾಘು ಕೋಟ್ಯಾನ್ ಕಾಪು ವಲಯ,  ತಿಮ್ಮಪ್ಪ ಸುವರ್ಣ ಪಡುಬಿದ್ರಿ ವಲಯ, ಗೀತಾ ಕೆ.ಪ್ರಭು ಕಟಪಾಡಿ ವಲಯ, ಸೆವ್ರಿನ್ ಡಿಸೋಜ ಬೆಳ್ಮಣ್ ವಲಯ ಮೊದಲಾದವರನ್ನು ಸನ್ಮಾನಿ­ಸಲಾಯಿತು.ಅಧ್ಯಕ್ಷತೆಯನ್ನು ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ  ಯುಗಾನಂದ ಶೇಟ್ಟಿ ವಹಿಸಿದ್ದರು. ಮಾಜಿ ಅದ್ಯಕ್ಷ ವಿಲಿಯಮ್ ಮಚಾದೊ ಪ್ರಾಸ್ತಾವಿಕವಾಗಿ ಮಾತನಾಡಿದರು.ಕ್ಷೇತ್ರಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ದೇವಾಡಿಗ ವರದಿ ವಾಚಿಸಿದರು. ಸದಾಶಿವ ಆಚಾರ್ಯ ಕಾರ್ಯಕ್ರಮ ಸಂಯೋಜಿಸಿದ್ದರು. ಶರ್ಮಿಳಾ  ಆಚಾರ್ಯ ನಿರೂಪಿಸಿದರು. ರಾಮ ಕರ್ಕೇರಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.