ಟೊಮೆಟೊಗೆ ಬಂಪರ್ ಬೆಲೆ

7

ಟೊಮೆಟೊಗೆ ಬಂಪರ್ ಬೆಲೆ

Published:
Updated:
ಟೊಮೆಟೊಗೆ ಬಂಪರ್ ಬೆಲೆ

ದಾವಣಗೆರೆ: ಟೊಮೆಟೊಗೆ ಈಗ ಬಂಪರ್ ಬೆಲೆ ಬಂದಿದೆ. ಒಂದು ವಾರದಿಂದ ಉತ್ತಮ ಧಾರಣೆ ಸಿಗುತ್ತಿದ್ದು, ಬರದ ನೆರಳಲ್ಲಿ ಬೆಳೆ ಕಳೆದುಕೊಂಡಿದ್ದ ಟೊಮೆಟೊ ಬೆಳೆಗಾರನ ಮೊಗದಲ್ಲಿ ಮಂದಹಾಸ ಮೂಡಿಸಿದೆ.ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಂದ ಟೊಮೆಟೊಗೆ ಈಗ ಹೆಚ್ಚಿನ ಬೇಡಿಕೆ ಬಂದಿರುವುದು ಬೆಳೆಗಾರರಿಗೆ ವರವಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ 24 ಕೆ.ಜಿ. ಟೊಮೊಟೊ ಬಾಕ್ಸ್‌ವೊಂದಕ್ಕೆ ್ಙ 100-150 ಇದ್ದ ಬೆಲೆ ಈಗ ್ಙ 350ರಿಂದ ್ಙ450ರ ಗಡಿ ದಾಟಿದೆ. ಮಧ್ಯವರ್ತಿಗಳೂ ಸಹ ರೈತರು ತಂದ ಆವಕಕ್ಕೆ ಉತ್ತಮ ಧಾರಣೆ ನೀಡಿ ಕೊಳ್ಳುತ್ತಿದ್ದಾರೆ.ಮಳೆ, ವಿದ್ಯುತ್ ಅಭಾವದ ನಡುವೆಯೂ ಉತ್ತಮವಾಗಿ ಬೆಳೆ ಮಾಡಿದ ರೈತನಿಗೆ ಈ ಧಾರಣೆ ಲಾಭ ತಂದುಕೊಡುತ್ತಿದೆ. ಸದಾ ಟೊಮೆಟೊ ದರ ಕುಸಿದು ಮಾರುಕಟ್ಟೆಯಲ್ಲೇ ಟೊಮೆಟೊ  ಚೆಲ್ಲಿ, ಪ್ರತಿಭಟನೆ ನಡೆಸುತ್ತಿದ್ದ ಬೆಳೆಗಾರನಿಗೆ ಈ ಬೆಲೆ ಹೆಚ್ಚಳ ಹೊಸ ನಿರೀಕ್ಷೆ ಮೂಡಿಸಿದೆ ಎನ್ನುತ್ತಾರೆ ವ್ಯಾಪಾರಸ್ಥರು.ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಶನಿವಾರ ತಮಿಳುನಾಡಿನಿಂದ ಅಧಿಕ ಸಂಖ್ಯೆಯಲ್ಲಿ ಲಾರಿಗಳು ಆಗಮಿಸಿದ್ದ ಕಾರಣಕ್ಕೆ ಟೊಮೆಟೊ ಬಾಕ್ಸ್‌ವೊಂದರ ದರ ್ಙ460ಕ್ಕೆ ಮುಟ್ಟಿತ್ತು. ಭಾನುವಾರ ್ಙ370ರಿಂದ ್ಙ420 ಇತ್ತು. ಇದೇ ಧಾರಣೆ ಸಿಕ್ಕರೂ ಪರವಾಗಿಲ್ಲ ಎಂಬುದು ರೈತರ ಅನಿಸಿಕೆ.ದರ ಏರಿಕೆ: ಅಕ್ಟೋಬರ್ 2ರಂದು ಕ್ವಿಂಟಲ್‌ಗೆ ್ಙ600-್ಙ800 ಇದ್ದ ಧಾರಣೆ ಅ. 21ರ ವೇಳೆಗೆ ್ಙ800-್ಙ1,200ಕ್ಕೆ ಏರಿಕೆಯಾಗಿತ್ತು. ಅ. 27ರ ವೇಳೆಗೆ ್ಙ1,000-್ಙ1,400ಕ್ಕೆ ಹೆಚ್ಚಾಗಿತ್ತು. ನ. 5ರಂದು ್ಙ 1,500ರಿಂದ ್ಙ1,600ರಷ್ಟಾಗಿತ್ತು. ಕಳೆದ ಒಂದು ತಿಂಗಳಿನಿಂದ ಟೊಮೆಟೊ ದರ ಹೀಗೆ ಏರಿಕೆಯಾಗುತ್ತಿದೆ. ದಾವಣಗೆರೆ ಒಳಗೊಂಡಂತೆ ಇತರೆ ಜಿಲ್ಲೆಗಳ ರೈತರೂ ಇಲ್ಲಿಗೆ ತರುತ್ತಿದ್ದಾರೆ.ಇನ್ನು ಚಿಲ್ಲರೆಯಾಗಿ ಕೊಂಡರೆ ಗ್ರಾಹಕ ಕೆ.ಜಿ.ಯೊಂದಕ್ಕೆ ್ಙ 25ರಿಂದ ್ಙ30 ಬೆಲೆ ಕೊಡಬೇಕಾಗಿದೆ.`ಟೊಮೆಟೊಗೆ ಸಕಾಲದಲ್ಲಿ ಉತ್ತಮ ಧಾರಣೆ ಸಿಕ್ಕರೆ ಮಾತ್ರ ಲಾಭ. ಕಳೆದ ವರ್ಷ ಆರು ಸಾವಿರ ಸಸಿ ನಾಟಿ ಮಾಡಲಾಗಿತ್ತು.ಈ ವರ್ಷದಷ್ಟು ಧಾರಣೆ ಸಿಗಲಿಲ್ಲ. ಕೊನೆಗೆ ಬೆಲೆಯಿಲ್ಲದೆ ಗದ್ದೆಗಳಿಗೆ ಜಾನುವಾರು ಬಿಟ್ಟು ಮೇಯಿಸಲಾಯಿತು. ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದು, ದರ ಏರಿಕೆಯಾಗಲು ಕಾರಣ~ ಎನ್ನುತ್ತಾರೆ ರೈತ ಜಗದೀಶ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry