ಟೊರೆಸ್‌ಗೆ ಚಿನ್ನದ ಬೂಟ್

ಗುರುವಾರ , ಜೂಲೈ 18, 2019
24 °C

ಟೊರೆಸ್‌ಗೆ ಚಿನ್ನದ ಬೂಟ್

Published:
Updated:

ಕೀವ್ (ಎಎಫ್‌ಪಿ): ಸ್ಪೇನ್ ಸ್ಟ್ರೈಕರ್ ಫೆರ್ನಾಂಡೊ ಟೊರೆಸ್ ಅವರು ಯೂರೊ-2012ನಲ್ಲಿ `ಗೋಲ್ಡನ್ ಬೂಟ್~ ಗೌರವ ಪಡೆದುಕೊಂಡರು.ಈ ಟೂರ್ನಿಯಲ್ಲಿ ಟೊರೆಸ್ ಗಳಿಸಿದ್ದು ಮೂರು ಗೋಲು. ಜರ್ಮನಿಯ ಮಾರಿಯೊ ಗೊಮೇಜ್, ರಷ್ಯಾದ ಆ್ಯಲನ್ ಜಾಗೊಯೆವಾ, ಕ್ರೊವೇಷಿಯಾದ ಮಾರಿಯೊ ಮಾಂಜುಕಿಕ್, ಇಟಲಿಯ ಮಾರಿಯೊ ಬಾಲೊಟೆಲ್ಲಿ ಹಾಗೂ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರೂ ಇಷ್ಟೇ ಗೋಲು ಗಳಿಸಿದ್ದಾರೆ.ಆದರೆ ಕ್ಷೇತ್ರದಲ್ಲಿದ್ದ ಅವಧಿಯ ಲೆಕ್ಕಾಚಾರದಲ್ಲಿ ನಿಕಟ ಪೈಪೋಟಿ ಇದ್ದದ್ದು ಟೊರೆಸ್ ಮತ್ತು ಗೊಮೇಜ್ ನಡುವೆ. ಟೊರೆಸ್ ಆಡಿದ್ದು 189 ನಿಮಿಷ. ಅದೇ ಗೊಮೇಜ್ ಅಂಗಳದಲ್ಲಿದ್ದ ಸಮಯ 280 ನಿಮಿಷ. ಇದೇ ಅಂಶದಲ್ಲಿ ಟೊರೆಸ್‌ಗೆ `ಗೋಲ್ಡನ್ ಬೂಟ್~ ಸಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry