ಟೋನಿ ಬ್ಲೇರ್- ಮಿತ್ತಲ್ ಭೇಟಿ

7

ಟೋನಿ ಬ್ಲೇರ್- ಮಿತ್ತಲ್ ಭೇಟಿ

Published:
Updated:

ಲಂಡನ್, (ಪಿಟಿಐ):  ಭ್ರಷ್ಟಾಚಾರದ ಕಳಂಕಕ್ಕೆ ಒಳಗಾಗಿರುವ ಪೂರ್ವ ಏಷ್ಯಾ ರಾಷ್ಟ್ರ ಕಜಕಿಸ್ತಾನವನ್ನು ಈ ಪಿಡುಗಿನಿಂದ ಮುಕ್ತಗೊಳಿಸುವ ಸಲುವಾಗಿ, ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರು ಭಾರತ ಸಂಜಾತ ಉಕ್ಕಿನ ದೊರೆ ಲಕ್ಷ್ಮಿ ಮಿತ್ತಲ್ ಅವರೊಂದಿಗೆ ಎಂಟು ದಶಲಕ್ಷ ಪೌಂಡ್‌ಗಳ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ.ಮೇ ತಿಂಗಳಲ್ಲಿ ಕಜಕಿಸ್ತಾನದ ರಾಜಧಾನಿ ಅಸ್ತಾನಾದಲ್ಲಿ ಸಭೆ ಸೇರಿದ್ದ ಪ್ರಮುಖ ಅಂತರ ರಾಷ್ಟ್ರೀಯ ಉದ್ದಿಮೆದಾರರ ಸಭೆಯಲ್ಲಿ ಬ್ಲೇರ್ ಅವರು ಬ್ರಿಟನ್‌ನ ಶ್ರೀಮಂತ ವ್ಯಕ್ತಿ ಮಿತ್ತಲ್ ಅವರ ಬಳಿ ಕುಳಿತಿದ್ದ ಚಿತ್ರವನ್ನೂ `ಡೈಲಿ ಮೇಲ್~ ಪತ್ರಿಕೆ ಈ ಸಂದರ್ಭದಲ್ಲಿ ಪ್ರಕಟಿಸಿದೆ.ಕಜಕಿಸ್ತಾನದಲ್ಲಿ ಸುಮಾರು ಐವತ್ತು ಸಾವಿರ ಮಂದಿಗೆ ಉದ್ಯೋಗ ನೀಡಿರುವ ಮಿತ್ತಲ್, ಅಲ್ಲಿನ ಅಧ್ಯಕ್ಷ ನೂರ್ ಸುಲ್ತಾನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.`ಬ್ಲೇರ್ ಅವರು ಕಜಕಿಸ್ತಾನದಲ್ಲಿ ಕಚೇರಿಯೊಂದನ್ನು ತೆರೆದ್ದ್ದಿದಾರೆ~ ಎಂದು ಅಧ್ಯಕ್ಷರ ಹಿರಿಯ ಸಲಹೆಗಾರರೊಬ್ಬರು ತಿಳಿಸಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry