ಶುಕ್ರವಾರ, ಮೇ 14, 2021
32 °C

ಟೋಪಿ ಧರಿಸಲು ಮೋದಿ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್, (ಪಿಟಿಐ): ಸದ್ಭಾವನಾ ಉಪವಾಸದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ನೀಡಿದ ಟೋಪಿಯನ್ನು (ಸ್ಕಲ್ ಕ್ಯಾಪ್) ಧರಿಸಲು ನಿರಾಕರಿಸಿ ಮುಜುಗರ ಉಂಟು ಮಾಡಿದ ಘಟನೆ ಭಾನುವಾರ ನಡೆದಿದೆ.ಕಾರ್ಯಕ್ರಮದಲ್ಲಿ ಮೋದಿ ಅವರನ್ನು ಅಭಿನಂದಿಸಲು ತೆರಳಿದ್ದ ದರ್ಗಾವೊಂದರ ಮುಖಂಡ ಸೈಯ್ಯದ್ ಇಮಾಮ್ ಶಾಹಿ ಸೈಯದ್ ಅವರು ಮುಸ್ಲಿಮರು ಧರಿಸುವ ಟೋಪಿಯನ್ನು ನೀಡಿದರು. ಆದರೆ ಟೋಪಿ ಧರಿಸಲು ನಯವಾಗಿ ನಿರಾಕರಿಸಿದ ಮೋದಿ, ಅದರ ಬದಲಾಗಿ ಶಾಲ್ ನೀಡುವಂತೆ ಕೋರಿದರು. ನಂತರ ನೀಡಲಾದ ಶಾಲನ್ನು ಸ್ವೀಕರಿಸಿದರು. `ಟೋಪಿ ಧರಿಸಲು ನಿರಾಕರಿಸುವ ಮೂಲಕ ಅವರು ತನಗಲ್ಲ, ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ್ದಾರೆ~ಎಂದು ಸೈಯದ್ ಪ್ರತಿಕ್ರಿಯೆ ನೀಡಿದ್ದಾರೆ.`ಟೋಪಿ ಧರಿಸಲು ಕೋರಿದಾಗ ಅವರು ಸ್ಪಷ್ಟವಾಗಿ ನಿರಾಕರಿಸಿದರು. ಟೋಪಿ ಧರಿಸುವುದರಿಂದ ತಮ್ಮ ವರ್ಚಸ್ಸಿಗೆ ಧಕ್ಕೆಯಾಗಬಹುದು ಎಂದು ಅವರು ಭಾವಿಸಿದಂತಿದೆ~ ಎಂದು ಅವರು ಟೀಕಿಸಿದ್ದಾರೆ. ಇದೊಂದು ಕ್ಷುಲ್ಲಕ ವಿಷಯ ಎಂದು ಬಿಜೆಪಿ ಘಟನೆಗೆ ಪ್ರತಿಕ್ರಿಯಿಸಿದೆ.ಪಂಡಿತರ ವ್ಯಂಗ್ಯ: ಉಪವಾಸ ಮಾಡಿದ ತಕ್ಷಣ ಎಲ್ಲ ಅಪರಾಧಗಳನ್ನೂ ಮನ್ನಿಸುವುದಾದರೆ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಾಬ್‌ಗೂ ಈ ನೀತಿಯನ್ನೇ ಅನುಸರಿಸಬಹುದೇನೋ ಎಂದು ಲಖನೌ ಮೂಲದ ಶಿಯಾ ಪಂಡಿತ ಮೌಲಾನಾ ಕಲ್ಬೆ ವ್ಯಂಗ್ಯವಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.