ಟೋಲ್ ಕೇಂದ್ರಗಳ ಮೇಲೆ ದಾಳಿ

7

ಟೋಲ್ ಕೇಂದ್ರಗಳ ಮೇಲೆ ದಾಳಿ

Published:
Updated:

ಮುಂಬೈ (ಪಿಟಿಐ): ಮಹಾರಾಷ್ಟ್ರದ ಒಂಬತ್ತು ರಸ್ತೆಗಳಲ್ಲಿ ಟೋಲ್ (ರಸ್ತೆ ಸುಂಕ) ಸಂಗ್ರಹಿಸುವುದನ್ನು ವಿರೋಧಿಸಿ ಭಾನುವಾರ ಶಂಕಿತ ಶಿವಸೇನಾ ಕಾರ್ಯಕರ್ತರು ನಾಲ್ಕು ಟೋಲ್ ಬೂತ್‌ಗಳ ಮೇಲೆ ನಡೆಸಿದ ದಾಳಿಯು ಹಿಂಸಾಚಾರಕ್ಕೆ ತಿರುಗಿದ್ದು, ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್ ಅವರು ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಂಡಿದ್ದಾರೆ.`ಕೊಲ್ಲಾಪುರದಲ್ಲಿನ ಪರಿಸ್ಥಿತಿಯನ್ನು ನಾನು ಅವಲೋಕಿಸುತ್ತಿದ್ದೇನೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ಪರಿಹಾರ ಮಾರ್ಗವೊಂದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ'ಎಂದು ಚೌವ್ಹಾಣ್ ಅವರು ಹೇಳಿದರು.ಕೊಲ್ಲಾಪುರದಲ್ಲಿ ಟೋಲ್ ಬೂತ್‌ಗಳನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry