ಟೌನ್‌ ಸಹಕಾರ ಬ್ಯಾಂಕ್‌: ` 2.40 ಕೋಟಿ ಲಾಭ

7

ಟೌನ್‌ ಸಹಕಾರ ಬ್ಯಾಂಕ್‌: ` 2.40 ಕೋಟಿ ಲಾಭ

Published:
Updated:

ಹೊಸಕೋಟೆ: ಪಟ್ಟಣದ ಟೌನ್‌ ಕೋ ಆಪರೇಟಿವ್‌ ಬ್ಯಾಂಕ್‌ 2012–13ನೇ ಸಾಲಿನಲ್ಲಿ₨ 2.40 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಚ್‌.ಎ.ನಟರಾಜ್‌ ತಿಳಿಸಿದರು. ಭಾನುವಾರ ನಡೆದ ಬ್ಯಾಂಕಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬ್ಯಾಂಕ್‌ 14,901 ಸದಸ್ಯ ರನ್ನು ಹೊಂದಿದ್ದು, ₨9.67 ಕೋಟಿ ಸ್ವಂತ ಬಂಡವಾಳ ಹೊಂದಿದೆ. ಷೇರು ಬಂಡವಾಳ ವನ್ನು ₨4.50 ಕೋಟಿಗೆ ನಿಗದಿಪಡಿಸಲು ಗುರಿಹೊಂದಿದೆ ಎಂದು ಹೇಳಿದರು.ರಿಸರ್ವ್  ಬ್ಯಾಂಕಿನ ಅನುಮತಿ ದೊರಕಿದ ಕೂಡಲೇ ಕಳೆದ ಸಾಲಿಗೆ ಶೇ 15 ಡಿವಿಡೆಂಡ್ ಕೊಡಲಾಗುವುದು ಎಂದರು.ಅಪಘಾತ- ವ್ಯಕ್ತಿ ಸಾವು : ಕೋಲಾರ ರಸ್ತೆಯ ಚನ್ನಾಪುರ ಗೇಟ್ ಬಳಿ ಶನಿವಾರ ರಾತ್ರಿ ವಾಹನ ಡಿಕ್ಕಿ ಹೊಡೆದು ಅಪರಿ ಚಿತ  ಪಾದಚಾರಿಯೊಬ್ಬರು ಮೃತ ಪಟ್ಟಿದ್ದಾರೆ.55 ವರ್ಷ ವಯಸ್ಸಿನ ವ್ಯಕ್ತಿ ಬೂದು ಬಣ್ಣದ ಪ್ಯಾಂಟ್, ಮಾಸಲು ಬಣ್ಣದ ತುಂಬು ತೋಳಿನ ಶರ್ಟ್, ಕತ್ತಿನಲ್ಲಿ ಕೆಂಪು ದಾರ  ಧರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry