ಟ್ರಕ್ ಮಾರುಕಟ್ಟೆ ಶೇ20 ಕುಸಿತ

7

ಟ್ರಕ್ ಮಾರುಕಟ್ಟೆ ಶೇ20 ಕುಸಿತ

Published:
Updated:
ಟ್ರಕ್ ಮಾರುಕಟ್ಟೆ ಶೇ20 ಕುಸಿತ

ಬೆಂಗಳೂರು: ಗಣಿಗಾರಿಕೆ ಉದ್ಯಮ ಕಳೆದ ಕೆಲವು ವರ್ಷಗಳಿಂದ ಹೆಚ್ಚು ಪ್ರಗತಿ ಕಾಣದೇ ಇರುವುದರಿಂದ ಬೃಹತ್ ಟ್ರಕ್‌ಗಳ ಮಾರುಕಟ್ಟೆಯೂ ಹೆಚ್ಚು ಬೆಳವಣಿಗೆ ಕಾಣಲಾಗುತ್ತಿಲ್ಲ ಎಂದು `ವೋಲ್ವೊ ಇಂಡಿಯಾ ಪ್ರೈ.ಲಿ.~ನ ವ್ಯವಸ್ಥಾಪಕ ನಿರ್ದೇಶಕ ಫಿಲಿಪ್ ಡಿವ್ರಿ ಹೇಳಿದರು.ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವೋಲ್ವೊದ 43 ಟನ್ ಸಾಮರ್ಥ್ಯದ ನೂತನ `ವೋಲ್ವೊ ಎಫ್‌ಎಂ 480 ಶ್ರೇಣಿಯ 10x 4 ಡಂಪ್ ಟ್ರಕ್~ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತದಲ್ಲಿನ ಅತ್ಯಾಧುನಿಕ-ಬೃಹತ್ ಟ್ರಕ್‌ಗಳ ಮಾರುಕಟ್ಟೆ ಪ್ರಮಾಣದಲ್ಲಿ ಚಿಕ್ಕದು. ವಾರ್ಷಿಕ 1500 ಟ್ರಕ್ ಮಾರಾಟದಷ್ಟಿದ್ದರೂ ವಹಿವಾಟು ಮೌಲ್ಯ ದೊಡxದು. 2011ರಲ್ಲಿ 1000ಕ್ಕೂ ಅಧಿಕ ಬೃಹತ್ ಟ್ರಲ್ ಮಾರಾಟವಾಗಿದ್ದವು ಎಂದರು.ಆದರೆ, 2012ರಲ್ಲಿ ಈ ಮಾರುಕಟ್ಟೆ ಸ್ಥಿತಿ ಆಶಾದಾಯಕವಾಗಿಲ್ಲ. ಶೇ 15ರಿಂದ 20ರಷ್ಟು ಕುಸಿತ ಸಂಭವವಿದೆ.  ಮುಖ್ಯವಾಗಿ ಕಬ್ಬಿಣದ ಅದಿರು ಗಣಿಗಾರಿಕೆ ಕೆಲವೆಡೆ ಸ್ಥಗಿತಗೊಂಡಿರುವುದೇ  ಇದಕ್ಕೆ ಕಾರಣ ಎಂದು ವಿವರಿಸಿದರು.ಭಾರತದಲ್ಲಿನ ವಿದ್ಯುತ್ ಉತ್ಪಾದನೆ ಕ್ಷೇತ್ರ ಕಲ್ಲಿದ್ದಲು ಮೂಲವನ್ನೇ ಹೆಚ್ಚು ಅವಲಂಬಿಸಿದೆ. ಕೆಲವು ವರ್ಷಗಳಿಂದ ಹೊಸ ಕಲ್ಲಿದ್ದಲು ಗಣಿ ಆರಂಭಗೊಳ್ಳುತ್ತಿಲ್ಲ. ಈ ಅಂಶವೂ ಬೃಹತ್ ಟ್ರಕ್‌ಗಳ ಮಾರುಕಟ್ಟೆಗೆ ಪೆಟ್ಟು ನೀಡುತ್ತಿದೆ. ಜತೆಗೆ, ಇಂಥ ಅತ್ಯಾಧುನಿಕ ಟ್ರಕ್ ಚಲಾಯಿಸಲು ಸಮರ್ಥ ಚಾಲಕರ ಕೊರತೆಯೂ ಇದೆ. ರಸ್ತೆಗಳ ಗುಣಮಟ್ಟವೂ ಸುಧಾರಿಸಬೇಕಿದೆ ಎಂದು ಟ್ರಕ್ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಅಂಶಗಳತ್ತ ಫಿಲಿಪ್ ಗಮನ ಸೆಳೆದರು.ಬೆಂಗಳೂರು ಹೊರವಲಯದಲ್ಲಿನ ವೋಲ್ವೊ ಘಟಕ 2500 ಟ್ರಕ್ ತಯಾರಿಸುವಷ್ಟು ಸಾಮರ್ಥ್ಯದ್ದಾಗಿದ್ದರೂ, ಸದ್ಯ ವರ್ಷಕ್ಕೆ 600ರಿಂದ 700 ಟ್ರಕ್ ಸಿದ್ಧವಾಗುತ್ತಿವೆ. 2013-14ನೇ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಬೃಹತ್ ಟ್ರಕ್ ಮಾರುಕಟ್ಟೆ ಮತ್ತೆ ಪ್ರಗತಿಯತ್ತ ಮುಖ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಂತರ ಮಾತನಾಡಿದ `ವೋಲ್ವೊ-ಈಶರ್ ಕಮರ್ಷಿಯಲ್ ವೆಹಿಕಲ್ ವಿಭಾಗ~ದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿನೋದ್ ಅಗರ್‌ವಾಲ್, 15 ವರ್ಷಗಳಿಂದ ಭಾರತದಲ್ಲಿ ಕಾರ್ಯನಿರತವಾಗಿರುವ `ವೋಲ್ವೊ~, ಇಲ್ಲಿನ ಬೃಹತ್ ಟ್ರಕ್ ಮಾರುಕಟ್ಟೆಯಲ್ಲಿ ಶೇ 70ರಷ್ಟು ದೊಡx ಪಾಲು ಹೊಂದಿದೆ ಎಂದರು.

ಹೊಸ 10x4 ಡಂಪ್ ಟ್ರಕ್ 480 ಎಚ್‌ಪಿ ಸಾಮರ್ಥ್ಯದ್ದಾಗಿದ್ದು, ಐದು ಆಕ್ಸೆಲ್ ಹೊಂದಿದೆ. ಈ ಟ್ರಕ್ ಭಾರತದಲ್ಲಿಯೇ ಪ್ರಥಮ. ಬೆಲೆ ರೂ 1.07 ಕೋಟಿ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಅರುಣ್ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry