ಗುರುವಾರ , ಏಪ್ರಿಲ್ 22, 2021
22 °C

ಟ್ರಸ್ಟ್ ವಿವಾದ: ವಾಮಾಚಾರ ಶಂಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರ ವಿರುದ್ಧ ಭುಗಿಲೆದ್ದ ವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಮುಂಭಾಗದಲ್ಲಿ ವಾಮಾಚಾರ ನಡೆಸುವ ಮೂಲಕ ಮತ್ತಷ್ಟು ವಿಕೋಪಕ್ಕೆ ತಿರುಗಿದ ಘಟನೆ ತಾಲ್ಲೂಕಿನ ಕ್ಯಾರಕಟ್ಟೆ ಗ್ರಾಮದ ಸಮೀಪದಲ್ಲಿ ಭಾನುವಾರ ಬೆಳಕಿಗೆ ಬಂದಿದೆ.



ಕ್ಯಾರಕಟ್ಟೆ- ಕಂಚಿಕೆರೆ ಗ್ರಾಮದ ಮಧ್ಯದ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿರುವ ವೀರಾಂಜನೇಯ (ಬಿದ್ದ ಹನುಮಪ್ಪ) ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕಳೆದ 2,3 ವರ್ಷಗಳ ಹಿಂದೆ ದಾವಣಗೆರೆ ಮೂಲದ ಗುತ್ತಿಗೆದಾರ ಎ.ವಿ. ಬಸವರಾಜಪ್ಪ ಎಂಬುವವರ ಹೆಸರಿನಲ್ಲಿ ಟ್ರಸ್ಟ್ ರಚಿಸಲಾಯಿತು.



ಜೀರ್ಣೋದ್ಧಾರದ ಹೆಸರಿನಲ್ಲಿ ದಾನಿಗಳ ಮೂಲಕ ನೆರವು ಪಡೆದ ಜಮಾ-ಖರ್ಚಿನ ವಿಷಯದಲ್ಲಿ ಟ್ರಸ್ಟ್ ಅಧ್ಯಕ್ಷ ಬಸವರಾಜಪ್ಪ, ಯಾವುದೇ ರೀತಿಯ ವಿವರಗಳನ್ನು ನೀಡದೆ, ಏಕಚಕ್ರಾಧಿಪತ್ಯ ನಡೆಸುತ್ತಿದ್ದಾರೆ ಎಂದು ಆಪಾದಿಸಿ ಟ್ರಸ್ಟಿಗಳಲ್ಲೊಬ್ಬರಾದ ಕಾವಲಹಳ್ಳಿ ಗ್ರಾಮದ ಕೆ.ಎಸ್. ಮರಳಸಿದ್ದಪ್ಪ ಹಾಗೂ ಇತರೆ ಟ್ರಸ್ಟಿಗಳು ಸಭೆ ನಡೆಸಿ, ಧ್ವನಿಮತದ ಮೂಲಕ ಅವರನ್ನು ಪದಚ್ಯುತಿಗೊಳಿಸ್ದ್ದಿದರು.



ಈ ವಿವಾದ ಇನ್ನೂ ಹಸಿಹಸಿ ಇರುವಾಗಲೇ ದೇವರ ಮೂರ್ತಿಯ ಮುಂಭಾಗದಲ್ಲಿ ವಾಮಾಚಾರ ನಡೆದಿದೆ. ಈ ಕುರಿತು ದೂರು ಸ್ವೀಕರಿಸಿದ ಪೊಲೀಸರು, ದೇವಸ್ಥಾನದ ಮುಂಭಾಗ ಸೇರಿದಂತೆ ವಿವಿಧ ದಿಕ್ಕುಗಳಲ್ಲಿ ನಾಲ್ಕಾರು ಕಡೆ ಗುಂಡಿ ಅಗೆದು ನೋಡಿದಾಗ, ಆಂಜನೇಯ ದೇವರ ಮೂರ್ತಿಯ ಮುಂಭಾಗದಲ್ಲಿ ಕಂಚಿನಮೂರ್ತಿ, ತಾಯಿತ, ನಿಂಬೆಹಣ್ಣು, ಮಣ್ಣಿನ ಕುಡಿಕೆ, ತೆಂಗಿನಕಾಯಿ ಸೇರಿದಂತೆ ವಾಮಾಚಾರಕ್ಕೆ ಬಳಸಲಾದ ವಿವಿಧ ಸಾಮಾಗ್ರಿಗಳು ಪತ್ತೆಯಾಗಿವೆ.



ವಾಮಾಚಾರದ ಸಾಮಾಗ್ರಿಗಳು ಗ್ರಾಮಸ್ಥರಲ್ಲಿ ಮತ್ತಷ್ಟು ಕೋಪಕ್ಕೆ ಕಾರಣವಾಗಿವೆ. ಸ್ಥಳಕ್ಕೆ ಸಿಪಿಐ ಬಿ.ಎಸ್. ಬಸವರಾಜ ನೇತೃತ್ವದ ಪೊಲೀಸ್ ತಂಡ ಭೇಟಿನೀಡಿ ಪರಿಶೀಲನೆ ನಡೆಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.