ಟ್ರಾನ್ಸ್ಫಾರ್ಮರ್ ಭಸ್ಮ: ವಿದ್ಯುತ್ ಇಲ್ಲದೆ ಗ್ರಾಮಸ್ಥರ ಪರದಾಟ
ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಗೌಡೂರು ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಸುಟ್ಟ ಪರಿಣಾಮ ಅರ್ಧ ಗ್ರಾಮ ಕಳೆದ ಮೂರು ದಿನಗಳಿಂದ ಕತ್ತಲ್ಲಲ್ಲಿ ರಾತ್ರಿ ಕಳೆದಯುವಂತಾಗಿದೆ. ಇದರಿಂದ ಗ್ರಾಮದ ನೀರು ಪೂರೈಸುವ ವ್ಯವಸ್ಥೆಗೆ ಅಡ್ಡಿ ಉಂಟಾಗಿ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.
20 ದಿನಗಳ ಹಿಂದೆ 63 ಕೆವಿಯ ಟ್ರಾನ್ಸ್ಫಾರ್ಮರ್ ಸುಟ್ಟಿತ್ತು. ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ 100 ಕೆವಿ ಸಾರ್ಮಥ್ಯದ ಟ್ರಾನ್ಸ್ಫಾರ್ಮರ್ ಅಳವಡಿಸಲಾಯಿತು. ಆದರೆ ಮೂರು ತಿಂಗಳಲ್ಲಿ 3 ಟ್ರಾನ್ಸ್ಫಾರ್ಮರ್ಗಳು ಸುಟ್ಟಿವೆ. ವಿದ್ಯುತ್ ಪೂರೈಸುವಲ್ಲಿ ತಾಂತ್ರಿಕ ದೋಷದಿಂದ ಪದೆ ಪದೆ ಟ್ರಾನ್ಸ್ಫಾರ್ಮರ್ಗಳು ಸುಡುತ್ತಿವೆ ಇದಕ್ಕೆ ಜೆಸ್ಕಾಂ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಬೇಕೆಂದು ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ.
ಈ ಗ್ರಾಮವು ಹಟ್ಟಿ ಜೆಸ್ಕಾಂ ಕಂಪೆನಿಯ ವಿದ್ಯುತ್ ಪ್ರಸರಣ ವ್ಯಾಪ್ತಿಗೆ ಬರುತ್ತದೆ. ಸಂಬಂಧಿಸಿದ ಸಹಾಯಕ ಎಂಜಿನಿಯರ್ ಅವರ ಗಮನಕ್ಕೆ ತಂದರೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಿಂಧನೂರಿನಿಂದ ಟ್ರಾನ್ಸ್ಫಾರ್ಮರ್ಗಳು ಬರಬೇಕು. ಇಲಾಖೆಯವರು ಯಾವಾಗ ಪೂರೈಸುತ್ತಾರೆ ಅಂದು ಬದಲಿಸುವುದಾಗಿ ಹೇಳುತ್ತಾರೆ. ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಜನರು ನೀರಿಗಾಗಿ ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ಹೇಳಿದರೆ ಅದು ನಮಗೆ ಗೊತ್ತಿಲ್ಲ ಎಂದು ನೇರವಾಗಿ ಹೇಳುತ್ತಿದ್ದಾರೆ.
ನಿಮಗೆ ಬೇಕಾದರೆ ವಾಹನ ವ್ಯವಸ್ಥೆ ಮಾಡಿಕೊಂಡು ಸಿಂಧನೂರಿಗೆ ಹೋಗಿ ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡಿಸಿಕೊಂಡು ಬರುವಂತೆ ಸಲಹೆ ನೀಡುತ್ತಿದ್ದಾರೆ. ಆದುದರಿಂದ ಇಲಾಖೆಯ ಉನ್ನತಾಧಿಕಾರಿಗಳು ಉತ್ತಮ ಗುಣಮಟ್ಟದ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಡುವಂತೆ ಗ್ರಾಮದ ಜನತೆ ಆಗ್ರಹಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.