ಸೋಮವಾರ, ಜೂಲೈ 6, 2020
24 °C

ಟ್ರೆಂಡಿ ಡ್ರೆಸ್‌ಗಳ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರೆಂಡಿ ಡ್ರೆಸ್‌ಗಳ ಮೋಡಿ

ಟ್ರೆಂಡಿ ಡ್ರೆಸ್‌ಗಳು ಯಾರಿಗೆ ಇಷ್ಟವಿಲ್ಲ ಹೇಳಿ. ಕಾಲೇಜು ವಿದ್ಯಾರ್ಥಿಗಳಿಗಂತೂ ಟ್ರೆಂಡಿ ಡ್ರೆಸ್ ಎಂದರೆ ತುಂಬಾ ಇಷ್ಟ. ಬೆಂಗಳೂರಿನ ಕ್ಯಾಥೆಡ್ರಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳನ್ನು ನೋಡಿದರೆ ಸಾಕು, ಇದು ನಿಜ ಎಂದು ಸಾಬೀತಾಗುತ್ತದೆ. ಅವರು ಯಾವಾಗಲೂ ಟ್ರೆಂಡಿಯಾಗಿರುವ ಮತ್ತು ಲೇಟೆಸ್ಟ್ ಫ್ಯಾಷನ್‌ನ ಉಡುಪುಗಳನ್ನೇ ಧರಿಸುತ್ತಾರೆ. ಅದು ಅವರಿಗೆ ಇಷ್ಟ ಕೂಡ. ಅದರಲ್ಲೂ ತಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಉಡುಪುಗಳನ್ನೇ ಅವರು ಧರಿಸುತ್ತಾರೆ.ಯುವತಿಯರು ಸಾಮಾನ್ಯವಾಗಿ ಜೀನ್ಸ್, ಕ್ಯಾಶುವಲ್ಸ್, ಲೆಗ್ಗಿಂಗ್ಸ್ ಜೊತೆ ಕುರ್ತಿಗಳನ್ನು ಧರಿಸಿದರೆ, ಯುವಕರು ಸಾಮಾನ್ಯವಾಗಿ ಸ್ಪೋರ್ಟ್ ಜೀನ್ಸ್, ಟೀ-ಶರ್ಟ್ ಮತ್ತು  ಫಾರ್ಮಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಧರಿಸಿದ ಉಡುಪಿಗೆ ಮ್ಯಾಚ್ ಆಗುವ ಶೂಗಳನ್ನೇ ಅವರು ಧರಿಸುತ್ತಾರೆ. ಯಾವ ಡ್ರೆಸ್ ಧರಿಸಲು ಯಾವುದು ಹಿತಕರ ಅದೇ ಈ ವಿದ್ಯಾರ್ಥಿಗಳಿಗೆ   ಪ್ರಮುಖವಾಗಿದೆ. ಫ್ಯಾಷನ್ ಏನಿದ್ದರೂ ಇವರಿಗೆ ಆಮೇಲಿನ ಮಾತು.‘ಕಾಲೇಜಿನ ಒಳಗೆ ಪ್ರವೇಶಿಸಿದೊಡನೆ ಸಾಮಾನ್ಯವಾಗಿ ಎಲ್ಲರೂ ಜೀನ್ಸ್ ಧರಿಸಿರುವುದು ಕಂಡುಬರುತ್ತದೆ’ ಎನ್ನುತ್ತಾರೆ ಆರ್ಟ್ಸ್ ವಿಭಾಗದ ಗೆಬ್ರಿಯೆಲಾ. ‘ಜೀನ್ಸ್ ಕಂಫರ್ಟಬಲ್ ಮಾತ್ರವಲ್ಲ. ಕುರ್ತಿ, ಟೀ-ಶರ್ಟ್, ಟ್ಯುನಿಕ್ಸ್ ಮತ್ತು ಟಾಪ್ ಜೊತೆಗೆ ಅದನ್ನು ಧರಿಸಬಹುದು. ಇಷ್ಟೇ ಅಲ್ಲ, ಹುಡುಗಿಯರು ಇವುಗಳ ಜೊತೆಗೆ ಸ್ಟೈಲಿಷ್ ಬ್ರೇಸ್‌ಲೆಟ್, ಉಂಗುರಗಳು ಮತ್ತು ಜೀನ್ಸ್‌ಗೆ ಕಾಂಟ್ರಾಸ್ಟ್ ಆದ ನೇಲ್ ಪಾಲಿಷ್ ಹಚ್ಚುತ್ತಾರೆ.‘ಮಿಸ್‌ಮ್ಯಾಚಿಂಗ್ ಈಗ ಸಾಮಾನ್ಯವಾಗಿದ್ದು ನಾವು ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ಬಣ್ಣದ ನೇಲ್‌ಪಾಲಿಷ್ ಅಥವಾ ಅವೆರಡೂ ಮಿಕ್ಸ್ ಮಾಡಿ ಬೆರಳಿಗೆ ಹಚ್ಚಿಕೊಳ್ಳುತ್ತೇವೆ.  ಇದು ನೋಡಲು ‘ಕೂಲ್’ ಅಲ್ಲದೆ ಅಬ್‌ಸ್ಟ್ರಾಕ್ಟ್ ಲುಕ್ ಕೊಡುತ್ತದೆ’ ಎನ್ನುತ್ತಾರೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಯಾಮಿನಿ.ಇನ್ನು ಜೀನ್ಸ್ ಮತ್ತು ಕುರ್ತಿ ಜೊತೆ ಮ್ಯಾಚ್ ಆಗುವ ಫ್ಲಾಟ್ ಚಪ್ಪಲಿಗಳನ್ನು ದರಿಸುವುದು ಅವರಿಗೆ ಇನ್ನೂ ಇಷ್ಟ. ನಾವು ಇವುಗಳನ್ನು ಬ್ರಿಗೇಡ್ ರಸ್ತೆ ಅಥವಾ ಕಮರ್ಷಿಯಲ್ ಸ್ಟ್ರೀಟ್‌ಗಳಿಂದ ಮತ್ತು ರಸ್ತೆ ಬದಿಯ ಸಣ್ಣ ಸಣ್ಣ ಅಂಗಡಿಗಳಿಂದ ನಾವು ಇದನ್ನು ಸಾಮಾನ್ಯವಾಗಿ ಖರೀದಿಸುತ್ತೇವೆ. ಬ್ರಾಂಡೆಡ್ ಚಪ್ಪಲಿಗಳಿಗೆ ಹೋಲಿಸಿದಲ್ಲಿ ಇವುಗಳು ತುಂಬಾ ಕಡಿಮೆ ದರದಲ್ಲಿ ದೊರೆಯುತ್ತವೆ’ ದ್ವಿತೀಯ ಪಿಯುಸಿಯ ಇನ್ನೋರ್ವ ವಿದ್ಯಾರ್ಥಿನಿ ಸುರೇಖಾ ಎನ್ನುತ್ತಾರೆ.ಹುಡುಗಿಯರು ಟ್ರೆಂಡಿ ಕುರ್ತಿಗಳು ಮತ್ತು ಲೆಗ್ಗಿಂಗ್ಸ್‌ಗಳನ್ನು ಬ್ರಾಂಡೆಡ್ ಮತ್ತು ಸಣ್ಣ ಅಂಗಡಿಗಳಿಂದಲೂ ಖರೀದಿಸುತ್ತಾರೆ. ಬ್ರಾಂಡೆಡ್ ಮತ್ತು ಇತರ ಅಂಗಡಿಗಳಲ್ಲಿ ವೆರೈಟಿಗಳಿದ್ದು  ಖರೀದಿಗೆ ಮುನ್ನ ನಮ್ಮ ಆಯ್ಕೆ ಅವೇ ಎಂದು ಖಾತ್ರಿಪಡಿಸಿದ ಬಳಿಕವಷ್ಟೇ ಅವುಗಳನ್ನು ಖರೀದಿಸುತ್ತೇವೆ’ ದಿವ್ಯಾ ಹೇಳುತ್ತಾರೆ. ಆದರೆ ಹುಡುಗರಿಗೆ ಅವರದ್ದೇ ಆದ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿವೆ. ಅವರಂತೂ ಟ್ರೆಂಡಿ ಟೀ-ಶರ್ಟ್, ಪುಲ್ ಓವರ್‌ಗಳಲ್ಲಿ ಸಂತುಷ್ಟರಾಗಿದ್ದಾರೆ.‘ಜೀನ್ಸ್ ಮತ್ತು ಟೀ ಶರ್ಟ್‌ಗಳನ್ನು ನಾವು ದಿನನಿತ್ಯ ಧರಿಸುತ್ತೇವೆ. ಆದರೆ ನಮ್ಮ ಕಾಲೇಜಿನಲ್ಲಿಯೂ ಡ್ರೆಸ್ ಕೋಡ್‌ಗಳಿವೆ. ಅದನ್ನು ನಾವು ಪಾಲಿಸಲೇಬೇಕು. ಲೋ-ವೇಸ್ಟ್ ಜೀನ್ಸ್‌ಗಳನ್ನು ಧರಿಸುವಂತಿಲ್ಲ,  ನಾವು ಕ್ಯಾನ್ವಾಸ್ ಶೂಗಳು ಮತ್ತು ಜೆರ್ಸಿಗಳನ್ನು ಧರಿಸುತ್ತೇವೆ. ಅದಂತೂ ಈಗ ಸಾಮಾನ್ಯ’ ಎನ್ನುತ್ತಾರೆ ದ್ವಿತೀಯ ಪಿಯುಸಿಯ ಸಿಬ್‌ಗತ್. ಒಟ್ಟಿನಲ್ಲಿ ಹೇಳುವುದಾದರೆ ನಾವು ಯಾರು, ನಮ್ಮ ವ್ಯಕ್ತಿತ್ವ ಏನೆಂದು ನಾವು ಧರಿಸಿದ ಡ್ರೆಸ್ ಹೇಳುತ್ತದೆ. ಎಂದು ಆರ್ಟ್ ವಿಭಾಗದ ಜೋನಾಥನ್ ಅಭಿಪ್ರಾಯಪಡುತ್ತಾರೆ.                            l

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.