ಟ್ರೈವ್ಯಾಲಿ: ರೇಡಿಯೊ ಕಾಲರ್ ಇಬ್ಬರು ವಿದ್ಯಾರ್ಥಿಗಳಿಗೆ ಮುಕ್ತಿ

7

ಟ್ರೈವ್ಯಾಲಿ: ರೇಡಿಯೊ ಕಾಲರ್ ಇಬ್ಬರು ವಿದ್ಯಾರ್ಥಿಗಳಿಗೆ ಮುಕ್ತಿ

Published:
Updated:

ವಾಷಿಂಗ್ಟನ್ (ಪಿಟಿಐ): ದೊಡ್ಡ ಪ್ರಮಾಣದಲ್ಲಿ ವೀಸಾ ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ಮುಚ್ಚಲಾಗಿರುವ ಕ್ಯಾಲಿಫೋರ್ನಿಯಾ ಮೂಲದ ಟ್ರೈವ್ಯಾಲಿ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ತೊಡಿಸಲಾಗಿದ್ದ ರೇಡಿಯೊ ಕಾಲರ್ ಅನ್ನು ಅಮೆರಿಕದ ವಲಸೆ ಅಧಿಕಾರಿಗಳು ತೆಗೆದು ಹಾಕಿದ್ದಾರೆ. ‘ವಲಸೆ ವ್ಯವಹಾರಗಳಿಗೆ ಸಂಬಂಧಿಸಿದ ವಕೀಲರಾದ ಕಲ್ಪನಾ ಪೆಡ್ಡಿಭೋತ್ಲಾ ಅವರು ಇಬ್ಬರು ವಿದ್ಯಾರ್ಥಿಗಳನ್ನು ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.ಅವರ ಮನವರಿಕೆಯ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ತೊಡಿಸಲಾಗಿದ್ದ ರೇಡಿಯೊ ಕಾಲರ್ ಅನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ’ ಎಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಮುಖ್ಯ ರಾಜತಾಂತ್ರಿಕರಾದ ಸುಷ್ಮಿತಾ ಗಂಗೂಲಿ ಥಾಮಸ್ ತಿಳಿಸಿದ್ದಾರೆ. ಈ ರಾಜತಾಂತ್ರಿಕ ಕಚೇರಿಯು ದಕ್ಷಿಣ ಏಷ್ಯಾ ವಕೀಲರ ಸಂಘದ ಜತೆಗೂಡಿ ಉಚಿತ ಕಾನೂನು ನೆರವು ಶಿಬಿರ ಹಮ್ಮಿಕೊಂಡಿತ್ತು. ಇದರಲ್ಲಿ ಪೆಡ್ಡಿಭೋತ್ಲಾ ಮತ್ತು ಈ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕ್ಯಾಲಿಫೋರ್ನಿಯಾದಲ್ಲಿ ಒಟ್ಟು 18 ವಿದ್ಯಾರ್ಥಿಗಳ ಕಾಲಿಗೆ ಈ ರೇಡಿಯೊ ಕಾಲರ್ ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಈ ಯೂನಿವರ್ಸಿಟಿಯಲ್ಲಿ ನೋಂದಣಿಗೊಂಡ ವಿದ್ಯಾರ್ಥಿಗಳು ಮೇರಿಲ್ಯಾಂಡ್, ವರ್ಜೀನಿಯಾ, ಪೆನ್ಸಿಲ್ವೇನಿಯಾ, ಟೆಕ್ಸಾಸ್‌ನಂತಹ ಕಡೆಗಳಲ್ಲೂ ಕೆಲಸ ಮಾಡುತ್ತಿರುವುದು ಗೊತ್ತಾದ ಹಿನ್ನೆಲೆಯಲ್ಲಿ ವೀಸಾ ದುರ್ಬಳಕೆ ಆರೋಪದ ಮೇರೆಗೆ ಈ ಯೂನಿವರ್ಸಿಟಿಯನ್ನು ಮುಚ್ಚಿ ವಿದ್ಯಾರ್ಥಿಗಳ ಚಲನವಲನ ತಿಳಿಯಲು ಅವರ ಕಾಲುಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿತ್ತು. ‘ಪೆಡ್ಡಿಭೋತ್ಲಾ ಅವರು ಮುಂದಿನ ವಾರ ಇನ್ನೂ ಕೆಲವು ವಿದ್ಯಾರ್ಥಿಗಳನ್ನು ಕರೆದೊಯ್ಯಲಿದ್ದಾರೆ, ಇದರಿಂದ ರಚನಾತ್ಮಕ ಫಲಿತಾಂಶ ದೊರಕುವ ಆಶಯ ಇಟ್ಟುಕೊಳ್ಳಲಾಗಿದೆ’ ಎಂದು ಸುಷ್ಮಿತಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry