ಶುಕ್ರವಾರ, ಫೆಬ್ರವರಿ 26, 2021
31 °C

ಟ್ರ್ಯಾಕ್ಟರ್‌ ಪಲ್ಟಿ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರ್ಯಾಕ್ಟರ್‌ ಪಲ್ಟಿ: ಇಬ್ಬರ ಸಾವು

ಚನ್ನರಾಯಪಟ್ಟಣ: ಅರಸೀಕೆರೆ ರಸ್ತೆಯಲ್ಲಿರುವ ಮೂಡನಹಳ್ಳಿ ಗೇಟ್‌ ಸಮೀಪ ವಿದ್ಯುತ್‌ ಕಂಬಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ಏಳು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.ಬಾಗೂರು ಗ್ರಾಮದ ರಾಮಾಚಾರಿ (45), ತಿಪಟೂರು ತಾಲ್ಲೂಕಿನ ತಡಸೂರು ಗ್ರಾಮದ ಮೂಡಲಗಿರಿ (28) ಮೃತಪಟ್ಟ ಕೂಲಿ ಕಾರ್ಮಿಕರು. ಘಟನೆಯಲ್ಲಿ ಗಾಯಗೊಂಡಿರುವ ಬಾಗೂರು ಹೋಬಳಿಯ ಓಬಳಾಪುರ ಗ್ರಾಮದ ಚಂದ್ರೇಗೌಡ, ರಾಮೇಗೌಡ, ಭಕ್ತರಹಳ್ಳಿ ಗ್ರಾಮದ ಶಿವಯ್ಯ, ಪ್ರವೀಣ್‌, ತಡಸೂರು ಗ್ರಾಮದ ಹೊನ್ನಾಚಾರ್‌, ಪ್ರದೀಪ, ಟ್ರ್ಯಾಕ್ಟರ್‌ ಚಾಲಕ ದಿನೇಶ್‌ ಪಟ್ಟಣದ­ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಂಡರು. ಗಾಯಾಳುಗಳನ್ನು 108 ಆಂಬುಲೆನ್ಸ್‌ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಇವರೆಲ್ಲ ಕೂಲಿ ಕಾರ್ಮಿಕರಾಗಿದ್ದು, ಕೆ. ಮಲ್ಲೇನಹಳ್ಳಿ ಗ್ರಾಮ­ದಲ್ಲಿ ವಿದ್ಯುತ್‌ ಕಂಬ ಅಳವಡಿಸಲು ಚನ್ನರಾಯ­ಪಟ್ಟಣದಿಂದ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಟ್ರ್ಯಾಕ್ಟರ್‌ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.