ಟ್ವಿಟರ್‌ನಲ್ಲಿ ಪ್ರಧಾನಿ ಕಾರ್ಯಾಲಯ...

7

ಟ್ವಿಟರ್‌ನಲ್ಲಿ ಪ್ರಧಾನಿ ಕಾರ್ಯಾಲಯ...

Published:
Updated:

ನವದೆಹಲಿ (ಐಎಎನ್‌ಎಸ್): ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಹಾಗೂ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನ ಹೆಸರು ಕೇಳದವರು ಇರಲಿಕ್ಕಿಲ್ಲ. `ಸಾವಿಲ್ಲದ ಮನೆಯಿಂದ ಸಾಸಿವೆ ತಾ~ ಅಂದಂತೆ ಫೇಸ್‌ಬುಕ್, ಟ್ವಿಟರ್ ಖಾತೆ ಇಲ್ಲದವರನ್ನು ಹುಡುಕಿಕೊಡಿ ಎಂಬ ದಿನವೂ ಭವಿಷ್ಯದಲ್ಲಿ ಬರಬಹುದು. ದೇಶದಲ್ಲೆಗ ಅವು ಅಷ್ಟು ಜನಪ್ರಿಯ.ಅಂದಹಾಗೇ ಪ್ರಧಾನಿ ಕಾರ್ಯಾಲಯ (ಪಿಎಂಒ) ಎರಡು ವಾರಗಳ ಹಿಂದೆ ಅಂದರೆ ಜ. 23ರಂದು ಟ್ವಿಟರ್‌ನಲ್ಲಿ ಖಾತೆ ತೆರೆದಿದೆ. ಈ ಹದಿನೈದು ದಿನಗಳಲ್ಲಿ 38 ಸಾವಿರಕ್ಕೂ ಹೆಚ್ಚು ಜನ `ಪಿಎಂಒ~ ಖಾತೆಯ ಬೆನ್ನತ್ತಿದ್ದಾರೆ. ಈ ಪ್ರತಿಕ್ರಿಯೆಯಿಂದ ಚಕಿತರಾಗಿರುವ `ಪಿಎಂಒ~ ಅಧಿಕಾರಿಗಳು ಫೇಸ್‌ಬುಕ್‌ನಲ್ಲೂ ಖಾತೆ ತೆರೆಯಲು ಯೋಜಿಸಿದ್ದಾರೆ.ಪ್ರಧಾನಿಯವರ ಮಾಧ್ಯಮ ತಂಡ, ಟ್ವಿಟರ್ ಖಾತೆಯನ್ನು ಚರ್ಚೆಯ ತಾಣವಾಗಿ ಮಾಡಲು ಯತ್ನಿಸುತ್ತಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಸಂವಹನ ನಡೆಸಲು ಪ್ರಧಾನಿ ಕಾರ್ಯಾಲಯದಲ್ಲಿ  ಸದ್ಯದಲ್ಲೇ ಪ್ರತ್ಯೇಕ ವಿಭಾಗ ತೆರೆಯಲಾಗುತ್ತದೆ. ಟ್ವಿಟರ್ ಖಾತೆಯ ಮೂಲಕ ಜನರ ಪ್ರಾಮಾಣಿಕ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತದೆ. ತೊಂದರೆಯಲ್ಲಿ ಸಿಲುಕಿರುವ ಜನರ ಸಹಾಯಕ್ಕೆ ಧಾವಿಸಲಾಗುತ್ತದೆ. ಪ್ರಧಾನಿ ಪರಿಹಾರ ನಿಧಿಯಿಂದ ನೆರವು ನೀಡಲೂ ಈ ಖಾತೆಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry