ಸೋಮವಾರ, ಮಾರ್ಚ್ 8, 2021
31 °C

ಟ್ವಿಟರ್‌ನಲ್ಲೂ ಕಮಲ್‌ ಕಮಾಲ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ವಿಟರ್‌ನಲ್ಲೂ ಕಮಲ್‌ ಕಮಾಲ್‌!

ತಮ್ಮ ನಟನಾ ಚಾತುರ್ಯದಿಂದ ದೇಶದಾದ್ಯಂತ ಅಗಾಧ ಅಭಿಮಾನಿ ಬಳಗವನ್ನು ಹೊಂದಿರುವ ಕಲಾವಿದ ಕಮಲ್‌ ಹಾಸನ್‌. ವಿಶಿಷ್ಟ ಅಭಿನಯ ಪ್ರತಿಭೆ ಮತ್ತು ವೈವಿಧ್ಯಮಯ ಪಾತ್ರಗಳಿಂದ ಅಭಿಮಾನಿಗಳನ್ನು ಸೂಜಿಗಲ್ಲಿನಂತೇ ಸೆಳೆಯುತ್ತಿದ್ದ ಕಮಲ್‌, ಇದೀಗ ಟ್ವಿಟರ್‌ನಲ್ಲಿಯೂ ತಮ್ಮ ಕಮಾಲ್‌ ಆರಂಭಿಸಿದ್ದಾರೆ.ಬಹುತೇಕ ನಟರು ಟ್ವಿಟರ್‌ ಅನ್ನು ಅಭಿಮಾನಿಗಳನ್ನು ತಲುಪುವ ಒಂದು ಮಾಧ್ಯಮವಾಗಿ ಬಳಸಿಕೊಂಡಿದ್ದರೂ ಕಮಲ್ ಇನ್ನೂ ಈ ಮೈಕ್ರೋ ಬ್ಲಾಗಿಂಗ್‌ ಜಗತ್ತನ್ನು ಪ್ರವೇಶಿಸಿರಲಿಲ್ಲ. ಇದೀಗ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದು, ಕೇವಲ 24 ಗಂಟೆಗಳ ಒಳಗೆ 30,000 ಹಿಂಬಾಲಕರನ್ನು ಗಳಿಸುವುದರ ಮೂಲಕ ಅವರಿಗಿರುವ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ.ಗಣರಾಜ್ಯೋತ್ಸವದ ದಿನ (ಜ.26) ಟ್ವಿಟ್ಟರ್‌ ಜಗತ್ತಿಗೆ ಪದಾರ್ಪಣೆ ಮಾಡಿದ ಅವರನ್ನು ಮೊದಲು ಸ್ವಾಗತಿಸಿದ್ದು ಶ್ರುತಿ ಹಾಸನ್‌. ಮೊದಲ ಟ್ವೀಟ್‌ನಲ್ಲಿ ಕಮಲ್‌,  ತಾವು ರಾಷ್ಟ್ರಗೀತೆಯನ್ನು ಹಾಡುತ್ತಿರುವ ವಿಡಿಯೊವನ್ನು ಪ್ರಕಟಿಸಿದ್ದಾರೆ. ಈ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಯೋಜಿಸಿದ್ದಾರೆ.‘ಭಾರತದ ಸ್ವಾತಂತ್ರ್ಯ ಹೋರಾಟ ಇಂದಿಗೂ ಅನನ್ಯವಾದದ್ದು. ಅದನ್ನು ಗೌರವದಿಂದ ಕಾಣುವುದರಿಂದ ಮಾತ್ರವೇ ಆ ಅನನ್ಯತೆಯನ್ನು ಉಳಿಸಿಕೊಳ್ಳಲು ಮತ್ತು ಹೊಸ ಜಗತ್ತನ್ನು ಕಟ್ಟಲು ಸಾಧ್ಯವಾಗುತ್ತದೆ’ ಎಂದು ಅವರು ಆ ವಿಡಿಯೊ ಜತೆ ಬರೆದುಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.