ಬುಧವಾರ, ಏಪ್ರಿಲ್ 21, 2021
29 °C

ಟ್ವೀಟುಲೋಕ ಸ್ನೇಹಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ-ಟೌನ್‌ನಲ್ಲಿ `ಫ್ರೆಂಡ್‌ಶಿಪ್ ಡೇ~ ದಿನದ ಗುಂಗು ಜೋರಾಗಿಯೇ ಇತ್ತು. ಬಾಲಿವುಡ್‌ನ ಖ್ಯಾತನಾಮರೆಲ್ಲರೂ ಸ್ನೇಹಿತರ ದಿನ ನೆಚ್ಚಿನ ಗೆಳೆಯ, ಗೆಳತಿಯರು ಹಾಗೂ ಅಭಿಮಾನಿಗಳ ಜೊತೆ ಟ್ವೀಟ್ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

ಅಂದಹಾಗೆ, ಬಿಪಾಶಾ ಬಸು ಸ್ನೇಹದ ಬಗ್ಗೆ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ.

 

`ನನ್ನ ಪ್ರಕಾರ ಸ್ನೇಹದ ಬಾಂಧವ್ಯ ಎಲ್ಲಕ್ಕಿಂತ ಮಿಗಿಲು. ಪ್ರತಿಯೊಬ್ಬರಿಗೂ ಗೆಳೆಯರು ಬೇಕೇಬೇಕು. ಸ್ನೇಹ ಎಲ್ಲರಿಗೂ ಅನಿವಾರ್ಯ. ನಾನು ನನ್ನೆಲ್ಲಾ ಸ್ನೇಹಿತರನ್ನು ತುಂಬಾ ಪ್ರೀತಿಸುತ್ತೇನೆ~ ಅಂತ ಸ್ನೇಹಕ್ಕೆ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.ಇನ್ನು, `ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು. ಒಳ್ಳೆಯ ಸ್ನೇಹಿತರನ್ನು ಅವರ ಗೆಳೆತನವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜೀವನದ ಫುಲ್‌ಟೈಮ್ ಜಾಬ್. ಆದರೆ ಎಲ್ಲರೂ ಈ ವಿಷಯದಲ್ಲಿ ಸಮರ್ಥರಿರುವುದಿಲ್ಲ~ ಎಂದು ಟ್ವೀಟ್ ಮಾಡಿದ್ದಾರೆ ಕರಣ್ ಜೋಹರ್.ಫರ‌್ಹಾ ಖಾನ್ ಗೆಳೆಯರ ದಿನದ ಶುಭಾಶಯ ತಿಳಿಸುತ್ತಾ, `ನನ್ನೆಲ್ಲಾ ಟ್ವೀಟ್ ಸಂಗಡಿಗರಿಗೆ ವಿಶೇಷ ಧನ್ಯವಾದ. ಈ ಭಾನುವಾರ ನಿಮ್ಮೆಲ್ಲರಿಗೂ ಶುಭ ತರಲಿ. ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ನಾನು ನನ್ನ ಮಕ್ಕಳೊಂದಿಗೆ ಈ ದಿನ ಕಳೆಯುತ್ತೇನೆ~ ಅಂತ ಟ್ವೀಟ್ ಮಾಡಿದ್ದಾರೆ.`ನನ್ನ ನೆಚ್ಚಿನ ಟ್ವಿಟರ್ ಗೆಳೆಯರೇ, ನಿಮಗೆಲ್ಲರಿಗೂ ಫ್ರೆಂಡ್‌ಶಿಪ್ ಡೇ ಶುಭಾಶಯ. ದೇವರು ನನಗಾಗಿ ನೀಡಿದ ವಿಶೇಷ ಗೆಳೆಯರು ನೀವು~ ಅಂತ ಸ್ನೇಹಕ್ಕೆ ತಮ್ಮ ರುಜು ಹಾಕಿದ್ದಾರೆ ಅರ್ಜುನ್ ರಾಮ್‌ಪಾಲ್. `ಹ್ಯಾಪಿ ಫ್ರೆಂಡ್‌ಶಿಪ್ ಡೇ ಯಾರ್ಸ್‌, ದೋಸ್ತ್, ಸಹೇಲಿಸ್, ಪಾಲ್ ಅಂಡ್ ಅಮಿಗೋಸ್~ ಅಂತ ಅವರಿಗಿಷ್ಟವಾದ ಎಲ್ಲ ಭಾಷೆಯಲ್ಲೂ ಶುಭಾಶಯ ಕೋರಿದ್ದಾರೆ ಫರ‌್ಹಾನ್ ಅಖ್ತರ್. ಇನ್ನುಳಿದಂತೆ, ಶ್ರೇಯಾ ಘೋಷಾಲ್, ನೇಹಾ ದುಪಿಯಾ ಮತ್ತು ತುಷಾರ್ ಕಪೂರ್ ಸ್ನೇಹಿತರ ದಿನದ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.