ಟ್ವೆಂಟಿ-20 ಕ್ರಿಕೆಟ್ ; ಪಾಕ್‌ಗೆ ಸರಣಿ ಜಯ

ಸೋಮವಾರ, ಮೇ 20, 2019
31 °C

ಟ್ವೆಂಟಿ-20 ಕ್ರಿಕೆಟ್ ; ಪಾಕ್‌ಗೆ ಸರಣಿ ಜಯ

Published:
Updated:

ಹರಾರೆ: ಮೊಹಮ್ಮದ್ ಹಫೀಜ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ಪಾಕಿಸ್ತಾನ ತಂಡದವರು ಇಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಎರಡನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ  ಐದು ರನ್‌ಗಳ ಗೆಲುವು ಸಾಧಿಸಿದರು. ಈ ಮೂಲಕ 2-0ರಲ್ಲಿ ಸರಣಿ ತಮ್ಮದಾಗಿಸಿಕೊಂಡರು.ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಆತಿಥೇಯ ಜಿಂಬಾಬ್ವೆ ತಂಡಕ್ಕೆ 141 ರನ್‌ಗಳ ಗುರಿ ನೀಡಿತ್ತು. 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಜಿಂಬಾಬ್ವೆ 136 ರನ್ ಮಾತ್ರ ಗಳಿಸಿತು.ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 141 (ಮೊಹಮ್ಮದ್ ಹಫೀಜ್ 51, ಉಮರ್ ಅಕ್ಮಲ್ 28; ಕೇಲ್ ಮೆಕ್ಲಮ್ ಜಾರ್ವಿಸ್ 15ಕ್ಕೆ3, ಎಲ್ಟೋನ್ ಚಿಗುಂಬರಾ 28ಕ್ಕೆ1), ಜಿಂಬಾಬ್ವೆ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 136 (ಟೆಟೆಂಡಾ ಟೈಬು ಔಟಾಗದೇ 37, ಚಿಗುಂಬರಾ 24; ಜುನೈದ್ ಖಾನ್ 23ಕ್ಕೆ2, ಮೊಹಮ್ಮದ್ ಹಫೀಜ್ 11ಕ್ಕೆ3).

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry