ಶುಕ್ರವಾರ, ಮೇ 14, 2021
21 °C

ಠಾಣೆಯಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ ಪ್ರೇಮಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಮದುವೆಗೆ ಮನೆಯವರ ವಿರೋಧವಿದ್ದರೂ ಅದನ್ನು ಲೆಕ್ಕಿಸದ ಪ್ರೇಮಿಗಳು ತಾಲ್ಲೂಕಿನ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಹಾರ ಬದಲಾಯಿಸುವ ಮೂಲಕ ಶುಕ್ರವಾರ ದಾಂಪತ್ಯ ಬದುಕಿಗೆ ಕಾಲಿರಿಸಿದರು.ತಾಲ್ಲೂಕಿನ ಹಿರೇಮುಕರ್ತಿನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ, ಮೈಸೂರು ಜಿಲ್ಲೆ ಬೆಳಲೆ ಗ್ರಾಮದ ಮಹೇಂದರ ಮತ್ತು ಅದೇ ಗ್ರಾಮದ ಲಕ್ಷ್ಮಿ ಮದುವೆಯಾದವರು.ಇವರು ಮೊದಲು ಸ್ಥಳೀಯ ದೇವಸ್ಥಾನದಲ್ಲಿ ಮದುವೆಯಾಗಿ ನಂತರ ಠಾಣೆಗೆ ಬಂದು ಸಬ್ ಇನ್ಸ್‌ಪೆಕ್ಟರ್ ಎಲ್.ಟಿ.ಸಂತೋಷ ಮತ್ತು ಸಿಬ್ಬಂದಿ, ಶಿಕ್ಷಕರಾದ ಗುರುಪಾದಮ್ಮ, ಹನಮಂತಪ್ಪ ವಿರುಪಾಪುರ ಅವರ ಸಮ್ಮುಖದಲ್ಲಿ ಹಾರ  ಬದಲಾಯಿಸಿಕೊಂಡರು.ಅನ್ಯ ಜಾತಿಗೆ ಸೇರಿದ ಇವರಿಬ್ಬರೂ ಮೈಸೂರಿನಲ್ಲಿ ಶಿಕ್ಷಕ ತರಬೇತಿ ಪಡೆಯುತ್ತಿರುವಾಗಲೇ ಪ್ರೀತಿಸುತ್ತಿದ್ದರು. ಆದರೆ, ಮದುವೆಯಾಗುವುದು ಮನೆಯವರಿಗೆ ಇಷ್ಟವಿರಲಿಲ್ಲ. ಶಿಕ್ಷಕ ಮಹೇಂದ್ರ ತಾವರಗೇರಾದಲ್ಲಿ ಮನೆ ಮಾಡಿಕೊಂಡಿದ್ದಾರೆ. ಜೂನ್ 18 ರಂದು ಲಕ್ಷ್ಮಿಯನ್ನು ಅಲ್ಲಿಗೆ ಕರೆಯಿಸಿಕೊಂಡಿದ್ದರು.ಸುದ್ದಿ ತಿಳಿದು ತಾವರಗೇರಾಕ್ಕೆ ಬಂದ ಲಕ್ಷ್ಮಿ ಅವರ ಅಣ್ಣ, ಚಿಕ್ಕಪ್ಪ `ಊರಿಗೆ ಬನ್ನಿ ಅಲ್ಲಿಯೇ ಹಿರಿಯ ಸಮಕ್ಷಮದಲ್ಲಿ ಆರತಕ್ಷತೆ ಶಾಸ್ತ್ರ ಇಟ್ಟುಕೊಳ್ಳೋಣ ಎಂದು ನೀಡಿದ ಸಲಹೆಯನ್ನು ತಿರಸ್ಕರಿಸಿದ ಲಕ್ಷ್ಮಿ ತಾನು ಮಹೇಂದ್ರ ಅವರ ಬಳಿಯೇ ಇರುವುದಾಗಿ ಸ್ಪಷ್ಟಪಡಿಸಿದರು' ಎಂಬುದನ್ನು ತಾವರಗೇರಾ ಪೊಲೀಸರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.