ಮಂಗಳವಾರ, ನವೆಂಬರ್ 19, 2019
29 °C

ಠಾಣೆ ಕಟ್ಟಡ ಕುಸಿತ: ಐವರ ಬಂಧನ

Published:
Updated:

ಠಾಣೆ (ಪಿಟಿಐ): ಠಾಣೆಯ ಕಟ್ಟಡ ಕುಸಿತ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಐದು ಜನರನ್ನು ಭಾನುವಾರ ಬಂಧಿಸಿದ್ದಾರೆ.ಠಾಣೆ ನಗರಸಭೆಯ ಸಹಾಯಕ ಆಯುಕ್ತ ಬಾಬಾ ಸಾಹೇಬ ಅಂದಳೆ, ಕಾರ್ಪೊರೇಟರ್ ಹಿರಾ ಪಾಟೀಲ್, ಕಾನ್‌ಸ್ಟೆಬಲ್ ಸೈಯದ್, ನಗರಸಭೆಯ ಕ್ಲರ್ಕ್ ಕಿಸಾನ್ ಮಡ್ಕೆ ಹಾಗೂ ಕರ ವಸೂಲಿಗಾರ ಜಬ್ಬಾರ್ ಪಟೇಲ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಶನಿವಾರ ಕಟ್ಟಡದ ಮಾಲೀಕ ಹಾಗೂ ಡೆವಲಪರ್ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಈವರೆಗೂ 8 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಏಳು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ 72 ಜನರು ಮೃತಪಟ್ಟಿದ್ದರು.

ಪ್ರತಿಕ್ರಿಯಿಸಿ (+)