ಸೋಮವಾರ, ಸೆಪ್ಟೆಂಬರ್ 16, 2019
21 °C

ಠಿಕಾಣಿ ಹೂಡಿದ ಅಧಿಕಾರಿಗಳಿಗೆ ಗೇಟ್‌ಪಾಸ್

Published:
Updated:

ಮಂಡ್ಯ: ಬೇರೆ ಸ್ಥಳಕ್ಕೆ ವರ್ಗಾವಣೆಗೊಂಡಿದ್ದರೂ, ಸರ್ಕಾರಿ ವಸತಿ ಸಮುಚ್ಛಯದಲ್ಲೇ ಠಿಕಾಣಿ ಹೂಡಿದ್ದ ಅಧಿಕಾರಿಗಳ ಕುಟುಂಬ ಸದಸ್ಯರನ್ನು ತಹಶೀಲ್ದಾರ್ ರಾಜೇಂದ್ರ ಪ್ರಸಾದ್ ಅವರು ನೇತೃತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು.ಮಂಡ್ಯ ಸುಭಾಷ್ ನಗರದ ಸರ್ಕಾರಿ ವಸತಿ ಗೃಹಗಳಲ್ಲಿ ನೆಲಸಿದ್ದ ಬೋರೇಗೌಡ, ರಮೆಶ್, ಆರ್.ಶಂಕರ್ ಹಾಗೂ ಸಿದ್ದೇಗೌಡ ಕುಟುಂಬದ ಸದಸ್ಯರನ್ನು ಎತ್ತಂಗಡಿ ಮಾಡಿಸಲಾಯಿತು. ಬೇರೆ ಸ್ಥಳಕ್ಕೆ ವರ್ಗಾವಣೆಯಾಗಿ 12 ವರ್ಷ ಕಳೆದಿದ್ದರೂ ಇಲ್ಲೇ ನೆಲಸಿದ್ದರು. ಇಲ್ಲಿ ಒಟ್ಟು 71 ಸರ್ಕಾರಿ ವಸತಿ ಗೃಹಗಳಿದ್ದು, 35 ಅಧಿಕಾರಿಗಳು ಮನೆಗಳಿಗಾಗಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ.

Post Comments (+)