ಡಂ ಡಂ ಗುಂಡಿರುವ ಶಸ್ತ್ರಾಸ್ತ್ರ

7

ಡಂ ಡಂ ಗುಂಡಿರುವ ಶಸ್ತ್ರಾಸ್ತ್ರ

Published:
Updated:

ನವದೆಹಲಿ (ಪಿಟಿಐ): ನಾಗರಿಕ ಉದ್ದೇಶದ ವಿಮಾನ ಒತ್ತೆ ಯತ್ನ ಅಥವಾ ಅಪಹರಣವನ್ನು ವಿಫಲಗೊಳಿಸುವ ಉದ್ದೇಶದಿಂದ ಅತ್ಯಾಧುನಿಕ `ಡಂ ಡಂ~ ಗುಂಡುಗಳನ್ನು ಹೊಂದಿರುವ ಶಸ್ತ್ರಾಸ್ತ್ರಗಳೊಂದಿಗೆ ಕಮಾಂಡೊಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.ಈ ಅತ್ಯಾಧುನಿಕ ಗುಂಡು ವಿಮಾನದಲ್ಲಿನ ದಾಳಿಕೋರನನ್ನು ಮಾತ್ರ ಸುಟ್ಟು ಬಿಡುತ್ತದೆ. ವಿಮಾನದ ಭಾಗ ಅಥವಾ ಪ್ರಯಾಣಿಕರಿಗೆ ಇದರಿಂದ ಯಾವುದೇ ಹಾನಿ ಮಾಡದಿರುವುದು ಇದರ ವಿಶೇಷ.ಅಂತರರಾಷ್ಟ್ರೀಯ ಕಾನೂನಿನ ಅನ್ವಯ ಬೇರೆ ಉದ್ದೇಶಗಳಿಗಾಗಿ ಈ ಗುಂಡು ಬಳಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ದೇಶದಲ್ಲಿನ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಗೆ ಇರುವ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಕಮಾಂಡೊ ಪಡೆ ಈ ಅತ್ಯಾಧುನಿಕ ಗುಂಡನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲು ತೀರ್ಮಾನಿಸಿದೆ. 2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಬಳಿಕ ಉಗ್ರರ ವಿರುದ್ಧ ಹೋರಾಡಲು ಇಂತಹದ್ದೊಂದು ಅಸ್ತ್ರದ ಅವಶ್ಯಕತೆ ಎದುರಾಗಿತ್ತು.ಈ ವಿಶೇಷ ಗುಂಡು ನಿರ್ದಿಷ್ಟ ವ್ಯಕ್ತಿಯನ್ನು ನಾಶ ಅಥವಾ ಆತ ಸ್ಥಳದಿಂದ ಕದಲದಂತೆ ಮಾಡಬಲ್ಲದು. ಇವುಗಳನ್ನು ಸದ್ಯದಲ್ಲೇ `ಮಿತ್ರ ರಾಷ್ಟ್ರ~ವೊಂದರಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.ಗುಂಡಿನ ಹಿನ್ನೆಲೆ: ಅತ್ಯಾಧುನಿಕ ಗುಂಡಿನ ಹೆಸರು `ಡಂ ಡಂ~. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಈ ಗುಂಡನ್ನು ಕೋಲ್ಕತ್ತದ `ಡಂ ಡಂ~ ಸೇನಾ ನೆಲೆಯಲ್ಲಿ ಅಭಿವೃದ್ಧಿಪಡಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಜಾಗತಿಕ ಯುದ್ಧದ ಸಂದರ್ಭದಲ್ಲಿ ವಿಶೇಷ ಕಮಾಂಡೋಗಳಿಗೆ ಮಾತ್ರ ಇದನ್ನು ನೀಡಲಾಗುತ್ತಿತ್ತು. ಸೇನಾ ಕಾರ್ಯಾಚರಣೆ ವೇಳೆ ನಿರ್ದಿಷ್ಟ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಭಾಗಕ್ಕೆ ಹಾನಿಯುಂಟು ಮಾಡದಿರಲಿ ಎಂಬ ಕಾರಣಕ್ಕಾಗಿ ಇದನ್ನು ಸಿದ್ಧಪಡಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry