ಡಬ್ಬಾ ಅಂಗಡಿ ತೆರವು ವಿರೋಧಿಸಿ ಪ್ರತಿಭಟನೆ

7

ಡಬ್ಬಾ ಅಂಗಡಿ ತೆರವು ವಿರೋಧಿಸಿ ಪ್ರತಿಭಟನೆ

Published:
Updated:

ಹುಬ್ಬಳ್ಳಿ: ರಸ್ತೆ ಪಕ್ಕದಲ್ಲಿರುವ ಡಬ್ಬಾ ಅಂಗಡಿಗಳನ್ನು ತೆರವು ಮಾಡದಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಸರ್ವಧರ್ಮ ಬೀದಿ ವ್ಯಾಪಾರಸ್ಥರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

`ಕಳೆದ 10-20 ವರ್ಷಗಳಿಂದ ಅವಳಿ ನಗರದ ರಸ್ತೆ ಪಕ್ಕದಲ್ಲಿ ನಿಗದಿ ಮಾಡಿದ ಬಾಡಿಗೆ ನೀಡಿ ಡಬ್ಬಾ ಅಂಗಡಿ ನಡೆಸಿಕೊಂಡು ಬಂದಿದ್ದೇವೆ. ಒಮ್ಮೆಗೆ ಈ ಅಂಗಡಿಗಳ ತೆರವು ಮಾಡಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಜೀವನೋಪಾಯಕ್ಕೆ ತೊಂದರೆ ಆಗಲಿದೆ' ಎಂದು ಪ್ರತಿಭಟನಾಕಾರರು ತಿಳಿಸಿದರು.ಡಬ್ಬಾ ಗಾಡಿಗಳನ್ನೂ ಜೊತೆಗೆ ಒಯ್ದು ರ‌್ಯಾಲಿ ನಡೆಸಿದ ಪ್ರತಿಭಟನಾ ಕಾರರು, `ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುವು ದರಿಂದ ಈ ಅಂಗಡಿಗಳನ್ನೇ ನೆಚ್ಚಿಕೊಂಡು ಬಂದ ಸಾವಿರಾರು ಕುಟುಂಬಗಳು ಬೀದಿಪಾಲಾಗಲಿವೆ. ಇದರಿಂದ ಆತ್ಮಹತ್ಯೆ ಹಾದಿ ಹಿಡಿಯುವುದರಲ್ಲಿ ಸಂದೇಹವಿಲ್ಲ. ಹೀಗಾದರೆ ಈ ಸಾವಿಗೆ ನೀವೇ ಕಾರಣರಾಗುತ್ತೀರಿ'  ಎಂದರು`ನಮಗೆ ಅನುಕೂಲ ಆಗುವಂತಹ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇತರೆ ಸಂಘ ಸಂಸ್ಥೆಗಳ ಜೊತೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದರು. ನಂತರ ಮೇಯರ್ ಡಾ. ಪಾಂಡುರಂಗ ಪಾಟೀಲ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry