ಡಬ್ಬಿಂಗ್: ಈ ಕಾಲದ ಅಗತ್ಯ

7

ಡಬ್ಬಿಂಗ್: ಈ ಕಾಲದ ಅಗತ್ಯ

Published:
Updated:

ಡಬ್ಬಿಂಗ್ ಬಗ್ಗೆ  ಚಿತ್ರನಟ ಶಿವರಾಜ್ ಕುಮಾರ್ ಅವರು ವ್ಯಕ್ತಪಡಿಸಿರುವ ನಿಲುವು ಸರಿಯಲ್ಲ. ಹಲವು ವರ್ಷಗಳ ಹಿಂದೆ ರಾಜ್‌ಕುಮಾರ್ ಡಬ್ಬಿಂಗ್ ವಿರೋಧಿಸಿದಾಗ ಅದಕ್ಕೆ ಅರ್ಥವಿತ್ತು. ಆಗ ಕನ್ನಡಕ್ಕೆ ಅಪಾಯವಿತ್ತು. ಈಗ ಕಾಲ ಬದಲಾಗಿದೆ.

 

ಜಗತ್ತಿನ ಶ್ರೇಷ್ಠವಾದುದನ್ನೆಲ್ಲಾ ತಮಿಳರು, ತೆಲುಗರು ತಮ್ಮ ತಮ್ಮ ಭಾಷೆಗೆ ಡಬ್ ಮಾಡಿಕೊಂಡು ನೋಡುತ್ತಿರುವಾಗ ಹಾಗೂ ಅವರವರ ಚಿತ್ರರಂಗಗಳಿಗೆ ಧಕ್ಕೆ ಬಂದಿಲ್ಲದಿರುವಾಗ ಕನ್ನಡ ಚಿತ್ರರಂಗಕ್ಕೆ ಮಾತ್ರ ಡಬ್ಬಿಂಗ್‌ನಿಂದ ಹೇಗೆ ಧಕ್ಕೆ ಬರುತ್ತದೆ?ಟೈಟಾನಿಕ್, ರೋಬೋ ಕನ್ನಡದಲ್ಲೇ ಸಿಕ್ಕರೆ ಇಂಗ್ಲಿಷ್, ತೆಲುಗು ಚಿತ್ರಗಳನ್ನು ನೋಡುವುದು ತಪ್ಪುತ್ತದೆ. ಕನ್ನಡದಲ್ಲೇ ನೋಡುತ್ತಾರೆ. ಕನ್ನಡ ಬೆಳೆಯುತ್ತೆ ಉಳಿಯುತ್ತೆ. ಕನ್ನಡದವರಿಗೆ ಕೆಲಸವಿರುವುದಿಲ್ಲ ಅನ್ನುವುದೂ ತಪ್ಪು, ಜಾಕಿ, ಬಿಂದಾಸ್, ಮಿಲನದ ಹೀರೋಯಿನ್‌ಗಳು ಕನ್ನಡದವರೆ?ಡಬ್ಬಿಂಗ್‌ನ್ನು ಆಯ್ಕೆ ಮಾಡಿದ ಸಿನಿಮಾಗಳಿಗೆ ಇಟ್ಟರೆ ಸರಿ. ಕನ್ನಡದ ಎಷ್ಟೊಂದು ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿವೆ ಗೊತ್ತೆ? ಈಗ ಇದು ತಿರುವು ಮುರುವು ಯಾಕಾಗಬಾರದು.ಇದು ಈ ಕಾಲದ ಅಗತ್ಯ. ಹಿಂದಿನ ನಿಲುವುಗಳೆಲ್ಲಾ ಸರಿಯಲ್ಲ. ಅದನ್ನು ಪರಾಮರ್ಶಿಸಿ ಕನ್ನಡ ಉಳಿಯಲು ಸಹಕರಿಸಿ ಎಂದು ಕಳಕಳಿಯಿಂದ ಕೋರುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry