ಡಬ್ಬಿಂಗ್ ಎಂಜಲು: ಸಿಪಿಕೆ

7

ಡಬ್ಬಿಂಗ್ ಎಂಜಲು: ಸಿಪಿಕೆ

Published:
Updated:

ಮೈಸೂರು: `ನಾಡಿನ ಎಲ್ಲ ಪ್ರಜ್ಞಾವಂತರು ಒಟ್ಟಾಗಿ ಡಬ್ಬಿಂಗ್ ವಿರುದ್ಧ ಹೋರಾಟಕ್ಕೆ ಇಳಿಯಬೇಕು~ ಎಂದು 78 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ.ಸಿ.ಪಿ.ಕೃಷ್ಣಕುಮಾರ್ ಸೋಮವಾರ ಕರೆ ನೀಡಿದರು.ನಗರದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, `ಇತರ ಭಾಷೆಯ ಚಿತ್ರಗಳು, ದೂರದರ್ಶನ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ ಮಾಡುವುದನ್ನು ವಿರೋಧಿಸಬೇಕು. ಏಕೆಂದರೆ ಇದೊಂದು ರೀತಿಯ ಎಂಜಲು~ ಎಂದು ಹೇಳಿದರು.`ಕನ್ನಡದ ಆರೋಗ್ಯದ ದೃಷ್ಟಿಯಿಂದ ನಮ್ಮ ಪ್ರೇಕ್ಷಕರು ಡಬ್ಬಿಂಗ್ ಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು ನೋಡಬಾರದು. ಕನ್ನಡದಲ್ಲಿ ಸ್ವೋಪಜ್ಞತೆ ಇದೆ. ಅದನ್ನು ಉಳಿಸಿಕೊಳ್ಳಲು ಸಾಹಿತಿಗಳು, ಕಲಾವಿದರು, ಕನ್ನಡಪರ ಸಂಘಟನೆಗಳು ಒಟ್ಟಾಗಿ ಚಳವಳಿ ರೂಪಿಸಬೇಕು~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry