ಡಬ್ಬಿಂಗ್ : ನಿರಂಕುಶವಾದ

7

ಡಬ್ಬಿಂಗ್ : ನಿರಂಕುಶವಾದ

Published:
Updated:

ಕನ್ನಡ ಚಿತ್ರರಂಗದಲ್ಲಿ ಅನ್ಯಭಾಷೆಗಳ ಚಲನಚಿತ್ರಗಳನ್ನು ಡಬ್ಬಿಂಗ್ ಮಾಡಬಾರದೆಂಬುದು, ಮಾಡಿದರೆ ಕನ್ನಡ ಚಿತ್ರರಂಗದಲ್ಲಿರುವವರು  ನಿರುದ್ಯೋಗಿಗಳಾಗುತ್ತಾರೆ ಎಂಬುದು ಸರಿಯಲ್ಲ. ಈ ಸಂಸ್ಕೃತಿ ಬಾರದಂತೆ ಗೋಕಾಕ್ ಚಳವಳಿ ರೀತಿ ಚಳವಳಿ ಮಾಡಬೇಕಾಗುತ್ತದೆ ಎನ್ನುವುದೂ ಕೂಡ ಸರಿಯಲ್ಲ. ಇದು ನಿರಂಕುಶವಾದವಾಗುತ್ತದೆ. ಒಂದು ಚಿಕ್ಕಕಟ್ಟೆಯ ನೀರಿನಲ್ಲಿರುವ ಮಂಡೂಕವು ನಾನಿರುವುದೇ ಸಾಗರ ಎಂದು ಭ್ರಮಿಸಿದಂತಾಗುತ್ತದೆ. ಅನ್ಯಭಾಷೆಯ ಉನ್ನತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಬಾರದೆಂದು ಹೇಳಿದಂತಾಗುತ್ತದೆ.ಕರ್ನಾಟಕದಲ್ಲಿರುವ ಅನ್ಯಭಾಷಿಕರು ಅವರ ಮಾತೃಭಾಷೆಯಲ್ಲಿ ಬಂದ ಚಲನಚಿತ್ರಗಳನ್ನು ನೋಡಲು ಮುಗಿಬೀಳುತ್ತಿದ್ದಾರೆ. ಡಬ್ ಮಾಡುವುದರಿಂದ ಅವರ ಭಾಷೆಯ ಚಲನಚಿತ್ರಗಳನ್ನು ನಮ್ಮ ಕನ್ನಡ ಭಾಷೆಯಲ್ಲಿ ನೋಡಿ ಅವರು ಕನ್ನಡ ಭಾಷೆಯ ಬಗ್ಗೆ ಒಲವುಳ್ಳವರಾಗುತ್ತಾರೆ. ಕನ್ನಡಿಗರು ಸಹ ಇತರ ಭಾಷೆಯ ಸಂಸ್ಕೃತಿಯನ್ನು ಅರಿಯಲು ಡಬ್ಬಿಂಗ್ ಅಗತ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry