ಶನಿವಾರ, ಮೇ 8, 2021
23 °C

ಡಬ್ಲುಟಿಒ ವಿನ್ಯಾಸಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಬ್ಲುಟಿಒ ವಿನ್ಯಾಸಕ್ಕೆ ಪ್ರಶಸ್ತಿ

ಯಶವಂತಪುರ ಬಳಿ ಮೆಟ್ರೊ ಹಿಂಭಾಗದಲ್ಲಿದೆ ನೀಲಿ ಗಾಜುಗಳ ಎತ್ತರದ ಕಟ್ಟಡ. ಇದಕ್ಕೆ ಭಾರತದ `ವಿಶ್ವ ವ್ಯಾಪಾರ ಕೇಂದ್ರ~ (ಡಬ್ಲುಟಿಒ) ಎಂಬ ಹೆಗ್ಗಳಿಕೆಯೂ ಇದೆ.ನ್ಯೂಯಾರ್ಕ್‌ನಲ್ಲಿ 10 ವರ್ಷದ ಹಿಂದೆ ಉಗ್ರರ ದಾಳಿಯಲ್ಲಿ ನೆಲಸಮವಾದ ಡಬ್ಲುಟಿಒ ಕಟ್ಟಡದ ಮಾಲೀಕತ್ವದ ಸಂಸ್ಥೆ ವಿಶ್ವದ ಪ್ರತಿಯೊಂದು ದೇಶದಲ್ಲಿ ಒಂದೊಂದು ಕಟ್ಟಡಕ್ಕೆ ಮಾತ್ರ ಮಾನ್ಯತೆ ನೀಡುತ್ತದೆ. ಭಾರತದಲ್ಲಿ ಅಂಥ ಅದೃಷ್ಟ ದಕ್ಕಿದ್ದು ಬ್ರಿಗೇಡ್ ಸಮೂಹ ನಿರ್ಮಿಸಿದ ಈ ಕಟ್ಟಡಕ್ಕೆ.ಇದೀಗ ಇದರ ಆಕರ್ಷಕ ಮತ್ತು ವಿಶಿಷ್ಟ ವಿನ್ಯಾಸಕ್ಕೆ ಇನ್ನೊಂದು ಕೀರ್ತಿ ಸೇರ್ಪಡೆಯಾಗಿದೆ.ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್‌ನ (ಐಸಿಐ) ಬೆಂಗಳೂರು ಕೇಂದ್ರ ಆಯೋಜಿಸಿದ್ದ `ಕಾಂಕ್ರೀಟ್ ಡೇ~ಯಲ್ಲಿ ಇದರ ಸುಂದರ ವಿನ್ಯಾಸ, ಮಜಬೂತು ನಿರ್ಮಾಣಕ್ಕೆ ಐಸಿಐ ಬಿರ್ಲಾ ಸೂಪರ್ ಎಂಡೊಮೆಂಟ್ ಪ್ರಶಸ್ತಿ ದೊರೆತಿದೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.