ಡಮರುಗ ಬಾರಿಸುತ್ತಿರುವ ಬಿಜೆಪಿ: ಪರಮೇಶ್ವರ್

7

ಡಮರುಗ ಬಾರಿಸುತ್ತಿರುವ ಬಿಜೆಪಿ: ಪರಮೇಶ್ವರ್

Published:
Updated:

ಬೆಂಗಳೂರು: ರಾಜ್ಯ ಎದುರಿಸುತ್ತಿರುವ ವಿದ್ಯುತ್ ಕೊರತೆಯಿಂದ ರೈತರು, ಜನಸಾಮಾನ್ಯರ ದಿನನಿತ್ಯದ ಚಟುವಟಿಕೆಗಳ ಮೇಲೆ ಆಗುತ್ತಿರುವ ದುಷ್ಪರಿಣಾಮ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

`ಕಳೆದ 60 ವರ್ಷಗಳಲ್ಲಿ ಸಾಧಿಸಲು ಸಾಧ್ಯವಾಗದೆ ಇರುವುದನ್ನು ಮೂರು ವರ್ಷಗಳಲ್ಲಿ ಸಾಧಿಸಲಾಗಿದೆ ಎಂದು ಬಿಜೆಪಿ ಡಮರುಗ ಬಾರಿಸುತ್ತಿರುವುದು ಜನತೆಗೆ ಮಾಡುವ ಮೋಸವಾಗಿದೆ. ವಿದ್ಯುತ್ ಸಮಸ್ಯೆಗೆ ಕ್ರಮ ತೆಗೆದುಕೊಳ್ಳದಿದ್ದರೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry