ಡರ್ಟಿ ಡಾನ್ಸ್

7

ಡರ್ಟಿ ಡಾನ್ಸ್

Published:
Updated:
ಡರ್ಟಿ ಡಾನ್ಸ್

ಮೋಹಕ ಸುಂದರಿ ವಿದ್ಯಾ ಬಾಲನ್, ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಷ್ಮಿ ಮತ್ತು ಚಾಕೊಲೇಟ್ ನಟ ತುಷಾರ್ ಕಪೂರ್ ಜೊತೆ ವೇದಿಕೆ ಮೇಲೆ ನರ್ತಿಸುವ ಆಸೆ ನಿಮಗಿದೆಯಾ? ಹಾಗಿದ್ದರೆ ನೀವು ಶುಕ್ರವಾರ (ನ. 25) ಮಧ್ಯಾಹ್ನ 3ಕ್ಕೆ ರಾಯಲ್ ಮೀನಾಕ್ಷಿ ಮಾಲ್‌ನಲ್ಲಿ ಖಂಡಿತಾ ಇರಲೇಬೇಕು.ಡಿಸೆಂಬರ್ 2ರಂದು ಬಿಡುಗಡೆಗೆ ಕಾದಿರುವ ತಮ್ಮ `ಡರ್ಟಿ ಪಿಕ್ಚರ್~ ಚಿತ್ರದ ಪ್ರಚಾರಕ್ಕಾಗಿ ವಿದ್ಯಾ ನಾಳೆ ಬೆಂಗಳೂರಿಗೆ ಬರಲಿದ್ದಾರೆ. ಜೊತೆಯಲ್ಲಿ ಇಮ್ರಾನ್ ಹಷ್ಮಿ ಮತ್ತು ತುಷಾರ್ ಕಪೂರ್ ಸಹ ಸಾಥ್ ನೀಡಲಿದ್ದಾರೆ.ಪ್ರಚಾರದಲ್ಲಿ ಬಾಲಿವುಡ್ ಮಂದಿ ಸದಾ ಮುಂದು. ಅದಕ್ಕೆ ತಕ್ಕಂತೆ ಯುವಸಮೂಹವನ್ನು ಆಕರ್ಷಿಸಲು ಬಗೆಬಗೆಯ ತಂತ್ರಗಳನ್ನು ಅನುಸರಿಸುತ್ತಾರೆ. ಅಂಥ ಒಂದು ತಂತ್ರಗಾರಿಕೆಯನ್ನು ಇಲ್ಲೂ ಕಾಣಬಹುದು.ಏಕೆಂದರೆ ವಿದ್ಯಾ, ಮಾಲ್‌ನಲ್ಲಿ ತಮ್ಮ ಚಿತ್ರದ ಊಲಾ...ಲಾ... ಲಾ ಗೀತೆಗೆ ತನ್ನ ಅಭಿಮಾನಿಗಳ ಜೊತೆಗೆ ಹೆಜ್ಜೆ ಹಾಕಲಿದ್ದಾರೆ.ಸಿಲ್ಕ್‌ಸ್ಮಿತಾ ಬದುಕನ್ನು ಆಧರಿಸಿದ ಸಿನಿಮಾ ಎಂದು ಪ್ರಚಾರ ಪಡೆದಿರುವ `ಡರ್ಟಿ ಪಿಕ್ಚರ್~ ಚಿತ್ರದಲ್ಲಿನ ಹಸಿಬಿಸಿ ದೃಶ್ಯಗಳಿಂದ ಈಗಾಗಲೇ ಯುವಕರ ನಿದ್ದೆಗೆಡಿಸಿರುವ ವಿದ್ಯಾ ಜೊತೆ ಊಲಾ...ಲಾ...ಲಾ ಎನ್ನುತ್ತಾ ಹೆಜ್ಜೆ ಹಾಕುವ ಕ್ಷಣವನ್ನು ಯಾರಾದರೂ ಬಿಟ್ಟುಕೊಟ್ಟಾರೆಯೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry