ಬುಧವಾರ, ನವೆಂಬರ್ 20, 2019
21 °C
ಅನಾಥವಾದ ಮಿಂಚಿಪದವು-ಗಾಳಿಮುಖ ರಸ್ತೆ

ಡಾಂಬರಿಕರಣ ಭಾಗ್ಯವೇ ದೊರೆತಿಲ್ಲ

Published:
Updated:

ಬದಿಯಡ್ಕ: ಕಾರಡ್ಕ ಗ್ರಾ.ಪಂ. ವ್ಯಾಪ್ತಿಯ ಮಿಂಚಿಪದವು-ಗಾಳಿಮುಖ ರಸ್ತೆಗೆ ಇದುವರೆಗೆ ಡಾಂಬರೀಕರಣದ ಕಾಮಗಾರಿ ನಡೆಯಲೇ ಇಲ್ಲ. ಪ್ರತಿ ದಿನ ನೂರಾರು ವಾಹನಗಳು ಸಾಗುವ ರಸ್ತೆ ನಿರ್ಲಕ್ಷ್ಯದಿಂದಾಗಿ ಹಾಳಾಗಿದೆ.ನಾಟೆಕಲ್ಲು, ಪಳ್ಳಪ್ಪಾಡಿ, ಬೆಳ್ಳೂರು, ಕಿನ್ನಿಂಗಾರು ಪ್ರದೇಶದ ಮಂದಿಗೆ ಗಾಳಿಮುಖಕ್ಕೆ ತೆರಳಲು ರಸ್ತೆಯ ದುರವಸ್ಥೆಯಿಂದಾಗಿ ಸಮಸ್ಯೆಯಾಗಿದೆ. ಈ ಪ್ರದೇಶದ ಅನೇಕ ಮಂದಿ ಗಾಳಿಮುಖ ಹಾಗೂ ಪುತ್ತೂರನ್ನು ವ್ಯವಹಾರಕ್ಕಾಗಿ ಅವಲಂಬಿಸಿದ್ದು, ರಸ್ತೆ ದುರಸ್ತಿ ಕಾಮಗಾರಿ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈ ರಸ್ತೆಯ ಸ್ವಲ್ಪಭಾಗ ಕರ್ನಾಟಕ ರಾಜ್ಯಕ್ಕೆ ಸೇರಿರುವುದರಿಂದ ರಸ್ತೆ ಕಾಮಗಾರಿಗಳು ಕೇರಳ ಹಾಗೂ ಕರ್ನಾಟಕ ರಾಜ್ಯದ ಪರಸ್ಪರ ಸಹಕಾರದಲ್ಲೇ ನಡೆಯಬೇಕಿದೆ. ಈ ಸಹಭಾಗಿತ್ವದಲ್ಲಿ ಅನೇಕ ಬಾರಿ ರಾಜ್ಯ ಮಟ್ಟದ ಮಾತುಕತೆಗಳು ನಡೆದಿದ್ದರೂ ಫಲಪ್ರದವಾಗಿಲ್ಲ.ಇದೀಗ ಎರಡೂ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರಗಳು ಆಡಳಿತದಲ್ಲಿರುವುದರಿಂದ ಮಿಂಚಿಪದವು ಗಾಳಿಮುಖ ರಸ್ತೆಯ ದುರಸ್ತಿಕಾರ್ಯಗಳನ್ನು ಕೂಡಲೇ ನಡೆಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.ಇದೇ ರೀತಿ ಕಾರಡ್ಕ ಗ್ರಾಪಂ ವ್ಯಾಪ್ತಿಯ ನಾವುಂಗಾಲ್-ಕೊಟ್ಟಪುಂಜೆ ರಸ್ತೆಯೂ ಕೂಡಾ ಅನೇಕ ವರ್ಷಗಳಿಂದ ದುರಸ್ತಿ ಭಾಗ್ಯ ಕಂಡಿಲ್ಲ. ಈ ರಸ್ತೆಯ ಬದಿ ಕುಸಿದಿದ್ದು, ಮಳೆ ನೀರು ಸಾಗಲು ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲ. ನೂರಾರು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಈ ರಸ್ತೆಯಲ್ಲಿ ಪ್ರತೀದಿನ ಸಂಚರಿಸುತ್ತಿದ್ದು, ಕೂಡಲೇ ರಸ್ತೆ ದುರಸ್ತಿ ಕಾರ್ಯ ನಡೆಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)