ಡಾಂಬರೀಕರಣಕ್ಕೆ ಪೂಜೆ

7

ಡಾಂಬರೀಕರಣಕ್ಕೆ ಪೂಜೆ

Published:
Updated:

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದಲ್ಲಿ ಬುಧವಾರ ನೂತನ ಡಾಂಬರೀಕರಣ ರಸ್ತೆಗೆ ಮಾಜಿ ಶಾಸಕ ಜಿ.ಚಂದ್ರಣ್ಣ ಗುದ್ದಲಿ ಪೂಜೆ ನೆರವೇರಿಸಿದರು.ಪೂಜೆ ನೆರವೇರಿಸಿದ ನಂತರ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಂ.ಬೀರಪ್ಪ, `ಕಾಮಗಾರಿಯನ್ನು ಮೂರು ತಿಂಗಳಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲಾಗುವುದು~ ಎಂದು ತಿಳಿಸಿದರು.ಜಿಲ್ಲಾ ಪಂಚಾಯ್ತಿಯು 13 ನೇ ಹಣಕಾಸು ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ 207 ರಿಂದ ಬೀರಸಂದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 550 ಮೀ ರಸ್ತೆಗೆ 4.90 ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.ತಾಲ್ಲೂಕು ಜೆ.ಡಿ.ಎಸ್ ಅಧ್ಯಕ್ಷ ಮುನಿಶಾಮೇಗೌಡ, ಕಾರ್ಯಾಧ್ಯಕ್ಷ ಮುನೇಗೌಡ, ತಾ.ಪಂ ಸದಸ್ಯ ಪಟಾಲಪ್ಪ, ವಿಶ್ವನಾಥಪುರ ಎಂಪಿಸಿಎಸ್ ಅಧ್ಯಕ್ಷ ಶಿವರಾಮಯ್ಯ, ಗ್ರಾ.ಪಂ. ಸದಸ್ಯ ನರಸಯ್ಯ, ಮುನಿಯಪ್ಪ, ಕೃಷ್ಣಮ್ಮ, ಮುಖಂಡ ಮದ್ದೂರಪ್ಪ, ರಾಮಚಂದ್ರಪ್ಪ, ವೇಣು, ಗೋಪಾಲ್, ಮುನಿರಾಜಪ್ಪ, ಬಿ.ಎಲ್.ನಾಗರಾಜ್, ಬೈರೇಗೌಡ, ನಂಜುನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry