ಡಾಂಬರೀಕರಣ ಕಾಮಗಾರಿ ಪರಿಶೀಲನೆ

7

ಡಾಂಬರೀಕರಣ ಕಾಮಗಾರಿ ಪರಿಶೀಲನೆ

Published:
Updated:

ರಾಯಚೂರು:  ನಗರದ ಬಸವೇಶ್ವರ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರೆಗೆ ಆರಂಭಿಸಿದ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳು ಶನಿವಾರ ವೀಕ್ಷಿಸಿದರು.

ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಗಫೂರ ಅವರೊಂದಿಗೆ ಮಾತುಕತೆ ನಡೆಸಿದರು. ರಸ್ತೆ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಹಾಗೂ  ಕಾಮಗಾರಿಗೆ ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದರು.

ಕಾಮಗಾರಿ ವೀಕ್ಷಿಸಿದ ತಂಡದಲ್ಲಿ ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಸಂಚಾಲಕರಾದ ಅಪರ್ಣಾ ಬಿ.ಆರ್, ಎಂ.ಬಿ ಮೂಲಿಮನಿ, ಎನ್.ಮಹಾವೀರ, ಸಲಹೆಗಾರರಾದ ಅಶೋಕ ಪ್ಯಾಟಿ,  ಮಹಾದೇವಪ್ಪ ಹಂಚಿನಾಳ, ಹೊನ್ನಕುಣಿ ಬಸನಗೌಡ ಪಾಟೀಲ್, ಸದಸ್ಯರಾದ ಕೆ.ಕೆ ದುರ್ಗಾಪ್ರಸಾದ, ಶಂಕರಪ್ಪ ನಾಯಕ, ಕೆ.ಸಂತೋಷ ಕುಮಾರ, ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry