ಗುರುವಾರ , ಜೂನ್ 17, 2021
22 °C

ಡಾಂಬರು ಟ್ಯಾಂಕರ್‌ಗೆ ಬಿದ್ದು ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್: ಸಮೀಪದ ಎಂಆರ್‌ಪಿಎಲ್‌ನ ಡಾಂಬರು ಘಟಕದಲ್ಲಿ ಸೋಮವಾರ ಬೆಳಿಗ್ಗೆ ಡಾಂಬರು ತುಂಬಿಸಲು ತಂದಿದ್ದ ಟ್ಯಾಂಕರ್‌ನೊಳಕ್ಕೆ ಆಕಸ್ಮಿಕವಾಗಿ ಬಿದ್ದ ಚಾಲಕ ಮತ್ತು ಕ್ಲೀನರ್ ಉಸಿರುಗಟ್ಟಿ ಮೃತಪಟ್ಟರು.ಮೃತರಾದ ಟ್ಯಾಂಕರ್ ಚಾಲಕ ಜನಶೇಖರ್ ಅಣ್ಣನ್ ಮತ್ತು ಕ್ಲೀನರ್ ಮಾರಿಮುತ್ತು ಚೆನ್ನೈನ `ಅಂಬಲ್ ಟ್ರಾನ್ಸ್‌ಪೋರ್ಟ್~ ಸಂಸ್ಥೆಗೆ ಸೇರಿದವರು.ಡಾಂಬರು ತುಂಬಿಸುವುದಕ್ಕೂ ಮುನ್ನ ಪರಿಶೀಲಿಸಲು ಮುಂದಾದ ಜನಶೇಖರ್ ಟ್ಯಾಂಕರ್ ಮುಚ್ಚಳ ತೆಗೆಯುತ್ತಿದ್ದಂತೆಯೇ ಒಳಗೆ ಸಂಗ್ರಹವಾಗಿದ್ದ ರಾಸಾಯನಿಕ ಗಾಳಿ ಒಮ್ಮೆಗೇ ಹೊರನುಗ್ಗಿತು. ತಲೆತಿರುಗಿದಂತಾಗಿ ಆಯತಪ್ಪಿದ ಅವರು ಒಳಕ್ಕೆ ಬಿದ್ದರು.ಚಾಲಕನನ್ನು ರಕ್ಷಿಸಲು ಮುಂದಾದ ಮಾರಿಮುತ್ತು ಸಹ ಟ್ಯಾಂಕರ್‌ನೊಳಕ್ಕೆ ಬಿದ್ದರು. ಪ್ರಜ್ಞೆತಪ್ಪಿದ್ದ ಇಬ್ಬರನ್ನೂ ಹೊರತೆಗೆದು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.ಸರಣಿ ಅವಘಡ: ಒಎನ್‌ಜಿಸಿಗೆ ಸೇರಿದ ಎಂಆರ್‌ಪಿಎಲ್‌ನಲ್ಲಿ ಕೆಲವು ತಿಂಗಳಿಂದೀಚೆಗೆ ಆಗ್ಗಾಗ್ಗೆ ಅಪಘಡಗಳು ನಡೆಯುತ್ತಲೇ ಇವೆ. ಜ. 21ರ ಸ್ಫೋಟದಲ್ಲಿ ಕುಳಾಯಿ ನಾಗೇಶ್ ಕುಲಾಲ್ ಎಂಬುವವರು ಬಲಿಯಾಗಿದ್ದರು. ಇದಕ್ಕೂ ಮುನ್ನ 2011ರ ಅಕ್ಟೋಬರ್ 20ರಂದು ನಡೆದ ಸ್ಫೋಟದಲ್ಲಿ ಉತ್ತರ ಭಾರತದ ಮೂವರು ಕಾರ್ಮಿಕರು ಅಸು ನೀಗಿದ್ದರು. ಎಂಆರ್‌ಪಿಎಲ್ ವಿಸ್ತರಣಾ ಕಾಮಗಾರಿ ಸ್ಥಳದಲ್ಲಿ ಟ್ಯಾಂಕ್ ಕುಸಿತದಿಂದ ಮತ್ತು ಕ್ರೇನ್ ಮುರಿದು ಬಿದ್ದು ತಲಾ ಒಬ್ಬರು ಮೃತಪಟ್ಟಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.