ಗುರುವಾರ , ಜೂನ್ 17, 2021
21 °C

ಡಾಂಬರ್ ಟ್ಯಾಂಕ್‌ಗೆ ಬಿದ್ದು ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸುರತ್ಕಲ್ ಸಮೀಪದ ಎಂಆರ್‌ಪಿಎಲ್‌ನಲ್ಲಿ ಸೋಮವಾರ ಬೆಳಿಗ್ಗೆ ಡಾಂಬರ್ ಟ್ಯಾಂಕ್ ಒಂದರ ಒಳಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ತಮಿಳುನಾಡಿನ ಟ್ಯಾಂಕರ್ ಚಾಲಕ ಜನಶೇಖರ ಅಣ್ಣನ್ ಮತ್ತು ಕ್ಲೀನರ್ ಮಾರಿಮುತ್ತು ಎಂದು ಗುರುತಿಸಲಾಗಿದೆ. ಟಾಂಬರ್ ತುಂಬಿಸಲು ಟ್ಯಾಂಕ್‌ನ ವಾಲ್ವ್ ತೆರೆಯುವಾಗ ಒಳಗಿದ್ದ ರಾಸಾಯನಿಕ ಅನಿಲದಿಂದ ಚಾಲಕ ಖಾಲಿ ಟ್ಯಾಂಕ್‌ಗೆ ಬಿದ್ದರು. ಅವರನ್ನು ಮೇಲೆತ್ತಲು ಹೋದ ಕ್ಲೀನರ್ ಸಹ ಒಳಗೆ ಬಿದ್ದುಬಿಟ್ಟರು. ಆಮ್ಲಜನಕದ ಕೊರತೆಯಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.