ಶುಕ್ರವಾರ, ನವೆಂಬರ್ 22, 2019
19 °C

ಡಾ.ಅಂಬೇಡ್ಕರ್ ಆದರ್ಶ ಪಾಲಿಸಲು ಕರೆ

Published:
Updated:

ಗುಲ್ಬರ್ಗ: ನಗರದ ಬ್ರಹ್ಮಪುರದಲ್ಲಿನ ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆ ಕಚೇರಿಯಲ್ಲಿ ಈಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವೇದಿಕೆ ಜಿಲ್ಲಾ ಅಧ್ಯಕ್ಷ ರಮೇಶ ಸರಡಗಿ ಕರೆ ನೀಡಿದರು.ಜನ್ಮದಿನದ ನಿಮಿತ್ತ ವೇದಿಕೆ ವತಿಯಿಂದ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಉದಯಕುಮಾರ ವಾಲಿಕಾರ್, ತುಕಾರಾಮ ಮುದಡಗಿ, ಚಂದ್ರಕಾಂತ ದಾಗಾಯಿ, ಸಂಘಟನಾ ಕಾರ್ಯದರ್ಶಿ ಯಲ್ಲಾಲಿಂಗ ಹಳ್ಳಿ, ಮನೋಹರ ತಾಳಮಡಗಿ, ರವಿಕುಮಾರ ಭಾವೆ, ದಶರಥ ತೇವಂಗಿ ಮತ್ತಿತರರು ಇದ್ದರು.ಜಯಂತಿ ಆಚರಣೆ

ಗುಲ್ಬರ್ಗ: ನಗರದ ಹೈಕೋರ್ಟ್ ಪೀಠದ ಸಮೀಪ ಇರುವ ಅಕ್ಕಮಹಾದೇವಿ ಕಾಲೊನಿಯಲ್ಲಿ ಅಖಿಲ ಕರ್ನಾಟಕ ಮೇದಾರ ಕೇತಯ್ಯ ಅನುಭವ ಮಂಟಪದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಹಮ್ಮಿಕೊಳ್ಳಲಾಯಿತು.ಪತ್ರಕರ್ತ ಶಿವರಾಯ ದೊಡ್ಡಮನಿ ಉದ್ಘಾಟಿಸಿದರು. ಬಿ.ಎಚ್.ಭಜಂತ್ರಿ, ನರಸಿಂಗರಾವ ಹೆಮನೂರ, ಸಿದ್ದಣ್ಣ ಸಜ್ಜನ, ಯಮುನಪ್ಪ ವರ್ಮಾ ಅತಿಥಿಗಳಾಗಿ ಭಾಗವಹಿಸಿದ್ದರು. ಮೇದಾರ ಕೇತಯ್ಯ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಭೀಮಣ್ಣ ಬೋನಾಳ ಅಧ್ಯಕ್ಷತೆ ವಹಿಸಿದ್ದರು.ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಮೇಜರ್ ಡಾ.ಶಂಕರಪ್ಪ ಎಸ್. ಹತ್ತಿ ಅವರನ್ನು ಸನ್ಮಾನಿಸಲಾಯಿತು.ಗುಲ್ಬರ್ಗ ವಿಭಾಗದ ಕೆ.ಎಸ್.ಆರ್.ಟಿ.ಸಿ ಕಲಾವಿದ ಚಂದ್ರಪ್ಪ ಹೂಗಾರ ಅಂಬೇಡ್ಕರ್ ಕ್ರಾಂತಿ ಗೀತೆ ಹಾಡಿದರು. ಭುವನೇಶ್ವರಿ ಬೋನಾಳ ಸ್ವಾಗತಿಸಿದರು. ವಜ್ರೇಶ್ವರಿ ಬೋನಾಳ ವಂದಿಸಿದರು.

ಪ್ರತಿಕ್ರಿಯಿಸಿ (+)